ಹಾಜಿ ಯೂಸುಫ್ ಖಾರ್ದಾರ್
ಮಂಗಳೂರು, ಮೇ 11: ನಗರದ ಕುದ್ರೋಳಿ ನಿವಾಸಿ, ಸಮಾಜ ಸೇವಕ ಹಾಜಿ ಯೂಸುಫ್ ಖಾರ್ದಾರ್ (80) ಶನಿವಾರ ನಿಧನರಾದರು. ಮೃತರು ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.
ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯರಾಗಿ, ಬೋಳಾರ ಶಾದಿಮಹಲ್ನ ಅಧ್ಯಕ್ಷರಾಗಿ, ಕುದ್ರೋಳಿ ಜಾಮಿಯಾ ಮಸೀದಿಯ ಉಪಾಧ್ಯಕ್ಷರಾಗಿ, ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
*ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಹಾಜಿ ಸಿ. ಮಹ್ಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಕೆ.ಅಶ್ರಫ್, ಹಾಜಿ ಇಮ್ತಿಯಾಝ್ ಅಹ್ಮದ್ ಕಾರ್ಕಳ, ಹಾಜಿ ಬಾಷಾ ಸಾಹೇಬ್ ಕುಂದಾಪುರ, ಹಾಜಿ ಎಸ್.ಎಂ. ರಶೀದ್, ಹಾಜಿ ಕೆ.ಪಿ. ಅಹ್ಮದ್ ಪುತ್ತೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಖಜಾಂಚಿ ಹಾಜಿ ಮೂಸಾ ಮೊಯಿದಿನ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಸಿ.ಎಂ. ಹನೀಫ್, ಅಹ್ಮದ್ ಬಾವ ಬಜಾಲ್, ಹಾಜಿ ರಿಯಾಝುದ್ದೀನ್, ಡಿ.ಎಂ. ಅಸ್ಲಂ, ಎಂ.ಎ. ಅಶ್ರಫ್, ಹಾಜಿ ಮೊಯಿದಿನ್ ಮೋನು, ಹಾಜಿ ಪಿ.ಪಿ. ಮಜೀದ್, ಯು.ಬಿ.ಸಲಿಂ, ಡಾ. ಆರೀಫ್ ಮಸೂದ್, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಅಬೀದ್ ಜಲಿಹಾಲ್, ಹಾಜಿ ಮಕ್ಬೂಲ್ ಅಹ್ಮದ್, ಹಾಜಿ ಎಸ್.ಎ ಖಲೀಲ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ.