ಕೇಶವ ಮಂಚಿ
ಉಡುಪಿ, ಮೇ 14: ಇಲ್ಲಿನ ಮಂಚಿಯ ವ್ಯಾಪಾರಿ ಕೇಶವ ಮಂಚಿ(64) ಸೋಮವಾರ ರಾತ್ರಿ ಹೃದಯಘಾತದಿಂದ ನಿಧನರಾದರು.
ಮಂಚಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದ ಅವರು, ಸ್ಥಳೀಯ ಜನ ಪ್ರೇಮ ಸಂಘದ ಮೂಲಕ ಸಕ್ರಿಯರಾಗಿದ್ದರು. ದೈವ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಉದಾರ ದಾನಿಯಾಗಿದ್ದರು. ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story