ಪಾಂಡುರಂಗ ಪ್ರಭು
ಶಿರ್ವ, ಜೂ.19: ಆರೋಗ್ಯ ಇಲಾಖೆಯಲ್ಲಿ ಶಿರ್ವ ಸಹಿತ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಬಂಟಕಲ್ಲು ಸಮೀಪದ ಸಡಂಬೈಲು ಮಾಣಿಬಾಕ್ಯರ್ ಪಾಂಡುರಂಗ ಪ್ರಭು(84) ವಯೋಸಹಜ ಅನಾರೋಗ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಬಹುಮುಖ ಪ್ರತಿಭಾ ಸಂಪನ್ನರು, ಯಕ್ಷಗಾನ ಕಲಾವಿದರೂ ಆಗಿದ್ದ ಇವರು, ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story