ರಮೇಶ್ ಮಾರ್ಪಳ್ಳಿ
ಉಡುಪಿ, ಜು.5: ಉಡುಪಿ ಜೀವ ವಿಮಾ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ರಮೇಶ್ ಮಾರ್ಪಳ್ಳಿ(64) ಅಲ್ಪಕಾಲದ ಅಸೌಖ್ಯದಿಂದ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಊರಿನ ದೇವಸ್ಥಾನ, ಗರೋಡಿ, ಬಬ್ಬುಸ್ವಾಮಿ ದೇವಸ್ಥಾನ, ಭಜನಾ ಮಂಡಳಿ, ಅಯ್ಯಪ್ಪ ಸ್ವಾಮಿ ಮಂದಿರ, ಗದ್ದಿಗೆ ಅಮ್ಮನ ದೇವಸ್ಥಾನ ಹೀಗೆ ಸ್ಥಳೀಯ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು, ಗೆಳೆಯರ ಬಳಗ ಮಾರ್ಪಳ್ಳಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿದ್ದರು.
Next Story