ನಾರಾಯಣ ಶೇರಿಗಾರ್
ಹಿರಿಯಡ್ಕ, ಜು.12: ಹಿರಿಯಡಕ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ, ಶ್ರೀವೀರಭದ್ರ ಸ್ವಾಮಿ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಹಾಗೂ ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ನಾರಾಯಣ ಶೇರಿಗಾರ್ ಓಂತಿಬೆಟ್ಟಿನ ತಮ್ಮ ನಿವಾಸದಲ್ಲಿ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ದೇವಾಡಿಗ ಸಮಾಜದ ಹಿರಿಯ ಸದಸ್ಯರಾಗಿದ್ದ ನಾರಾಯಣ ಶೇರಿಗಾರ್, ಪತ್ನಿ, ಇಬ್ಬರು ಪುತ್ರಿಯರು, ಬಂಧು ಬಳಗ ಹಾಗೂ ಸಮಾಜ ಬಾಂಧವರನ್ನು ಅಗಲಿದ್ದಾರೆ.
Next Story