ಎ.ಪಿ. ಷರೀಫ್ ಕೃಷ್ಣಾಪುರ
ಮಂಗಳೂರು, ಜು.15: ಸುರತ್ಕಲ್ ಸಮೀಪ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಎ.ಪಿ. ಷರೀಫ್ (60) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸುರತ್ಕಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಕೃಷ್ಣಾಪುರ 7ನೇ ಬ್ಲಾಕಿನ ಬದ್ರಿಯಾ ಜುಮಾ ಮಸೀದಿಯ ಆಡಳಿತಕ್ಕೆ ಒಳಪಟ್ಟ ದಫನ ಭೂಮಿಯಲ್ಲಿ ಖಬರ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಇವರು ಸ್ಥಳೀಯವಾಗಿ ಜನಾನುರಾಗಿದ್ದ ವ್ಯಕ್ತಿಯಾಗಿದ್ದರು.
Next Story