ಪರ್ಕಳ ರಾಧಾಕೃಷ್ಣ ಹೆಗಡೆ
ಉಡುಪಿ, ಜು.22: ಕಾಂಗ್ರೆಸ್ ಮುಖಂಡ ಪರ್ಕಳ ರಾಧಾಕೃಷ್ಣ ವೈ ಹೆಗಡೆ(55) ಅಲ್ಪಕಾಲದ ಅಸೌಖ್ಯದಿಂದ ಪರ್ಕಳ ಪೇಟೆಯಲ್ಲಿರುವ ಸ್ವಗ್ರಹದಲ್ಲಿ ನಿಧನರಾದರು.
ಉಡುಪಿ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿದ್ದ ಇವರು, ಕಾಂಗ್ರೆಸ್ ಪಕ್ಷದ ಮುಂದಾಳು ಆಗಿದ್ದರು. ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಪರೀಕ ಸೋಮನಾಥ ಹೆಗಡೆ, ಪರ್ಕಳ ಕಾಂಗ್ರೆಸ್ನ ಮೋಹನ್ ದಾಸ್ ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story