ಅಬ್ದುಲ್ ಖಾದರ್
ಹಳೆಯಂಗಡಿ: ಮೀನು ವ್ಯಾಪಾರ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮುಲ್ಕಿ ತಾಲೂಕಿನ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಎಂದು ತಿಳಿದು ಬಂದಿದೆ. ಎಂದಿನಂತೆ ಇಂದು ಬೆಳಗ್ಗಿನ ಜಾವ ಮಲ್ಪೆಗೆ ಹೋಗೆ ಮೀನು ತಂದಿದ್ದ ಅವರು, ದ್ಚಿಚಕ್ರ ವಾಹನದಲ್ಲಿ ಮನೆಮನೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಬೆಳಗ್ಗೆ 9ರ ವೇಳೆಗೆ ಮನೆ ಸಮೀಪದಲ್ಲೇ ಮೀನು ನೀಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಅವರ ಸಹೋದರರಿಗೆ ಮಾಹಿತಿ ನೀಡಿ ಬಳಿಕ ಮುಕ್ಕದ ಖಾಸಗಿ ಅಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೃದಯಾಘಕ್ಕೊಳಗಾಗಿ ಮೃತಪಟ್ಟಿರುವುದನ್ನು ಘೋಷಿಸಿದರು ಎಂದು ತಿಳಿದು ಬಂದಿದೆ.
ಅಬ್ದುಲ್ ಖಾದರ್ ಅವರು ಈ ಹಿಂದೆ ಖಾಸಗಿ ಬಸ್ ಗಳಲ್ಲಿ ಕಂಡೆಕ್ಟರ್ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಓರ್ವ ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಸಹಿತ ಅಪಾರ ಬಮಧು ಮಿತ್ರರನ್ನು ಅಗಲಿದ್ದಾರೆ.