ತುಕಾರಾಮ ಶೆಟ್ಟಿ
ಸುರತ್ಕಲ್: ಇಲ್ಲಿನ ಶಿಬರೂರು ತುಕಾರಾಮ ಶೆಟ್ಟಿ ಪರ್ಲಬೈಲ್ ಗುತ್ತು (76) ಗುರುವಾರ ಹೃದಯಾಘಾತದಿಂದ ನಿಧನರಾದರು.
ತುಕಾರಾಮ ಶೆಟ್ಟಿ ಮುಂಬೈಯಲ್ಲಿ ಹೊಟೇಲು ಉದ್ಯಮಿಯಾಗಿದ್ದರು. ಶಿಬರೂರು ದೈವಸ್ಥಾನಕ್ಕೆ ಸಂಬಂಧಿಸಿದಂತೆ ಗಡಿಕಾರರಾಗಿ ವರ್ಷದ ಹಿಂದೆ ಪಟ್ಟ ಪಡೆದಿದ್ದರು. ಶಿಬರೂರು ದೈವಸ್ಥಾನ ಬ್ರಹ್ಮಕಲಶೋತ್ಸವದ ಸಮಿತಿಯಲ್ಲಿದ್ದು, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರು. ಕೊಡುಗೈದಾನಿಯಾಗಿದ್ದರು.
ಇವರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಗಡಿಕಾರರಾಗಿ, ಬಂಟರ ಸಂಘ ತಿಬಾರ್ ಸ್ಥಾಪಕ ಅಧ್ಯಕ್ಷರಾಗಿ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಶಿಬರೂರು ಇದರ ವ್ಯವಸ್ಥಾಪನ ಸಮಿತಿಯಾ ಮಾಜಿ ಸದಸ್ಯರಾಗಿ ಶ್ರೀ ಕುಂಭಕಂಟಿನಿ ಎಜುಕೇಶನ್ ಟ್ರಸ್ಟ್ ಸದಸ್ಯರಾಗಿದ್ದು, ಊರಿನ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶಿಬರೂರು ದೈವಸ್ಥಾನದ ಆಡಳಿತ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.