ಹಾಜಿ ಎಂ.ಎ.ಮೊಹಿದಿನ್ ಅಮಾನುಲ್ಲಾ
ಮಂಗಳೂರು: ಕಂದಾವರ ನಿವಾಸಿ, ಅಮಾನುಲ್ಲಾ ಕುಟುಂಬದ ಹಿರಿಯ ಸದಸ್ಯ ಹಾಜಿ ಎಂ.ಎ.ಮೊಹಿದಿನ್ (82) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಝೀಝ್ ಕಂದಾವರ ಸಹಿತ 5 ಗಂಡು ಮತ್ತು 3 ಹೆಣ್ಣು ಮಕ್ಕಳು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
*ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಾಜಿ ಮೇಯರ್ ಕೆ.ಅಶ್ರಫ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕಾರ್ಪೊರೇಟರ್ ಅಬ್ದುಲ್ಲತೀಫ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಬಾಷಾ, ಬಾಳ ಗ್ರಾಪಂ ಮಾಜಿ ಅಧ್ಯಕ್ಷ ಹಸನಬ್ಬ ಮಂಗಳಪೇಟೆ, ಹಾಜಿ ಕೆ. ಅಬೂಬಕ್ಕರ್ ಸಿದ್ದೀಕ್ ಕೂಳೂರು, ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಅದ್ದು ಹಾಜಿ, ಹಾಜಿ ಶಾಹುಲ್ ಹಮೀದ್ ಮೆಟ್ರೊ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಹೆಚ್.ಖಾಲಿದ್ ಉಜಿರೆ, ನಲ್ಪಾಡ ಕುಣಿಲ್ ವಸತಿ ಸಂಕೀರ್ಣದ ಅಧ್ಯಕ್ಷ ಆಸೀಫ್, ಶಾಫಿ ಮದನಿ ಕರಾಯ, ಮುಸ್ಲಿಂ ಲೀಗ್ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಕಂದಾವರ ಗ್ರಾಪಂ ಸದಸ್ಯ ಅದ್ದ ಸಂತಾಪ ಸೂಚಿಸಿದ್ದಾರೆ.