ಕಮಲಾ ಪಕ್ಕಲಡ್ಕ
ಮಂಗಳೂರು : ಕಮ್ಯುನಿಸ್ಟ್ ಪಕ್ಷದ ಅಭಿಮಾನಿ, ಬಜಾಲ್ ಪಕ್ಕಲಡ್ಕ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಕಾಲ ಸಹಾಯಕ ಕಾರ್ಯಕರ್ತೆಯಾಗಿ ದುಡಿದಿದ್ದ ಕಾಮ್ರೇಡ್ ಕಮಲಾ ಪಕ್ಕಲಡ್ಕ (91) ಶನಿವಾರ ಮುಂಜಾನೆ ಪಕ್ಕಲಡ್ಕದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಕಮ್ಯುನಿಸ್ಟ್ ಚಳುವಳಿಯ ಕೇಂದ್ರವಾಗಿದ್ದ ಬಜಾಲ್ ಪಕ್ಕಲಡ್ಕ ಪರಿಸರದಲ್ಲಿ ಬೆಳೆದಿದ್ದ ಕಮಲಾ ರೈತ ಮತ್ತು ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು.
ರಾಜ್ಯದಲ್ಲಿ ಐಸಿಡಿಎಸ್ ಯೋಜನೆ ಜಾರಿಗೊಂಡಾಗ ಪಕ್ಕಲಡ್ಕ ಯುವಕ ಮಂಡಲದಲ್ಲಿ ಪ್ರಾರಂಭಗೊಂಡ ಅಂಗನವಾಡಿ ಕೇಂದ್ರದಲ್ಲಿ ಸಹಾಯಕ ಕಾರ್ಯಕರ್ತೆಯಾಗಿ ಸೇರ್ಪಡೆಗೊಂಡ ಕಮಲಾ ಅವರು ತನ್ನ ಜೀವನದ ಸುದೀರ್ಘ ಅವಧಿಯಲ್ಲಿ ಪುಟಾಣಿ ಮಕ್ಕಳ ಸೇವೆ ಸಲ್ಲಿಸಿ ಮಕ್ಕಳ ಹಾಗೂ ಪೋಷಕರ ಪ್ರೀತಿಗೆ ಪಾತ್ರರಾಗಿದ್ದರು.
*ಕಮಲಾ ಅವರ ನಿಧನಕ್ಕೆ ಸಿಪಿಎಂ, ಡಿವೈಎಫ್ಐ, ಎಸ್ಎಫ್ಐ, ಪಕ್ಕಲಡ್ಕ ಯುವಕ ಮಂಡಲ, ಜನತಾ ವ್ಯಾಯಾಮ ಶಾಲೆ, ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್ ಸಂತಾಪ ಸೂಚಿಸಿದೆ.
Next Story