ಅಬ್ದುಲ್ ರಹೀಮಾನ್
ಕುಂದಾಪುರ, ಅ.29: ಕುಂದಾಪುರದ ಯೂಸುಫ್ ವಲಿಯುಲ್ಲಾ (ಕ.ಅ.) ಅವರ ದರ್ಗಾ ಸಮೀಪದ ನಿವಾಸಿ ಅಬ್ದುಲ್ ರಹೀಮಾನ್ (79) ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ಶ್ರಮ ಜೀವಿಯಾಗಿದ್ದ ಅವರು ಎಲ್ಲ ಜಾತಿ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಬದುಕಿದ್ದರು.
ಮೃತರು ಪತ್ನಿ, ಸುನ್ನೀ ಸಂಘಟನೆಯ ಪ್ರಮುಖ ಮುಹಮ್ಮದ್ ಇಕ್ಬಾಲ್ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story