ರಾಘವೇಂದ್ರ ಭಟ್
ಉಡುಪಿ, ಡಿ.1: ಕಾಪು ತಾಲೂಕಿನ ಬಿಳಿಯಾರು ನಿವಾಸಿ ದಿ.ಸುಬ್ಬಣ್ಣ ಭಟ್ ಅವರ ದ್ವಿತೀಯ ಪುತ್ರ ರಾಘವೇಂದ್ರ ಭಟ್(50) ಶನಿವಾರ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಕುಂಜಾರು ದುರ್ಗಾದೇವಿ ದೇವಸ್ಥಾನದಲ್ಲಿ ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವರು ಹಿಂದೆ ಕಾಣಿಯೂರು ಶ್ರೀಗಳು ಹಾಗೂ ಪೇಜಾವರ ಹಿರಿಯಶ್ರೀಗಳ ಸಹಾಯಕರಾಗಿ ದುಡಿದಿದ್ದರು.
ಮೃತರು ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
Next Story