ಹಮೀದ್ ಹಾಜಿ
ಮಂಗಳೂರು: ಕಳೆದ 20 ವರ್ಷಗಳಿಂದ ನೆಲ್ಯಾಡಿ ಮೊರಂಕಳಾದಲ್ಲಿ ನೆಲೆಸಿರುವ ಸಕಲೇಶಪುರದ ದೊಡ್ಡತಪ್ಪಾಲೆ ನಿವಾಸಿ ಹಮೀದ್ ಹಾಜಿ (70) ನಿಧನರಾದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಇಬ್ಬರು ಸೊಸೆಯಂದಿರು, ಒಬ್ಬ ಅಳಿಯ ಹಾಗು 9 ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರು ಕಡೇಶಿವಾಲಯ ಸಾಮಾಜಿಕ ಕಾರ್ಯಕರ್ತ ಕೆಎಸ್ ಮುಹಮ್ಮದ್ ಹಾಜಿ ಕೆಮ್ಮಾನ್ ಅವರ ಮಾವ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ನೆಲ್ಯಾಡಿಯ ಕೇಂದ್ರ ಮಸೀದಿಯ ಆವರಣದಲ್ಲಿ ದಫನ ಮಾಡಲಾಗಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
Next Story