ಠಸ್ಸೆ ವೆಂಡರ್ ಅಣ್ಣಾಜಿ
ಉಡುಪಿ, ಜ.6: ಸೂರಾಲು ಮಡಿ ನಿವಾಸಿ ಠಸ್ಸೆ ವೆಂಡರ್ ಅಣ್ಣಾಜಿ (89) ಅವರು ಜ.5ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಸಮೀಪ ವಾಸವಿದ್ದ ಅವರು ಬಳಿಕ ಇಂದ್ರಾಳಿಯಲ್ಲಿ ನೆಲೆಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸುಮಾರು 35 ವರ್ಷಗಳ ಕಾಲ ಠಸ್ಸೆ ವೆಂಡರ್ ಆಗಿ ಸೇವೆ ಸಲ್ಲಿಸಿ, ನ್ಯಾಯವಾದಿಗಳಿಗೆ ಚಿರಪರಿಚಿತರಾಗಿದ್ದರು.
ನಗರದ ಟೌನ್ ಕೋ ಅಪರೇಟಿವ್ ಬ್ಯಾಂಕಿನಲ್ಲಿ 30 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
Next Story