ಹಿರಿಯ ಹೋರಾಟಗಾರ ಕೆ.ಎಂ.ಕೊಮ್ಮಣ್ಣ ನಿಧನ

ಕೋಲಾರ : ನೆಲ ಸಂಸ್ಕೃತಿಯ ಜೀವ ತಾಣ ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹಾಗೂ ಜೀವಪರ ಕಾಳಜಿಯ ಹಿರಿಯ ಹೋರಾಟಗಾರ ಕೆ.ಎಂ.ಕೊಮ್ಮಣ್ಣ (65) ಇಂದು ಮದ್ಯಾಹ್ನ ನಿಧನರಾಗಿದ್ದಾರೆ.
ಗೌರಿಬಿದನೂರಿನ ನಾಗಸಂದ್ರ ಭೂ ಹೋರಾಟದ ರೂವಾರಿ ಕೆ.ಎಂ.ಕೊಮ್ಮಣ್ಣ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಅಪ್ಪಟ ಹೋರಾಟಗಾರ. ನಾಲ್ಕು ದಶಕಗಳ ತಮ್ಮ ಸುದೀರ್ಘ ಹೋರಾಟದ ಬದುಕಿನ ಭಾಗವಾಗಿ ಆದಿಮ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕಳೆದ 19 ವರ್ಷಗಳಿಂದ ಆದಿಮದ ಹುಟ್ಟು ಬೆಳವಣಿಗೆಯಲ್ಲಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಕೆ.ಎಂ.ಕೊಮ್ಮಣ್ಣನವರ ಪ್ರಾರ್ಥಿವ ಶರೀರವನ್ನು ಕೋಲಾರದ ಗೋಕುಲ ಕಾಲೇಜು ಹತ್ತಿರದ ಹೌಸಿಂಗ್ ಬೋರ್ಡ್ ನ ಮನೆಯ ಹತ್ತಿರ ನಾಳೆ ದಿನಾಂಕ : 23/01/2025 ಬೆಳಿಗ್ಗೆ 7ರಿಂದ ಮದ್ಯಾಹ್ನ 1 ಗಂಟೆವರಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story