ಆನಂದ ಕಟೀಲು

ಉಡುಪಿ, ಜ.25: ಕಟೀಲು ಮೇಳದ ಕಲಾವಿದರಾದ ಆನಂದ ಕಟೀಲು (50) ಇಂದು ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಟೋ ಚಲಾಯಿಸುತ್ತಿರುವಾಗ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದರು.
ಕಟೀಲು ಮೇಳದಲ್ಲಿ 15 ವರ್ಷಗಳ ತಿರುಗಾಟವೂ ಸೇರಿದಂತೆ, ಭಗವತೀ ಮೊದಲಾದ ಮೇಳಗಳಲ್ಲಿ ಸ್ತ್ರೀವೇಷ, ಪುಂಡುವೇಷಧಾರಿಯಾಗಿ ಎರಡೂವರೆ ದಶಕಗಳ ಕಾಲ ಕಲಾಸೇವೆಗೈದಿದ್ದಾರೆ. ಆನಂದ ಅವರು ಪತ್ನಿ, ಬಂಧುಗಳು ಹಾಗೂ ಅಪಾರ ಅಭಿಮಾನಗಳನ್ನು ಅಗಲಿದ್ದಾರೆ.
ಆನಂದ ಕಟೀಲು ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story