ಚಂಚಲ ಆರ್ ನಾಯ್ಕ್

ಮಂಗಳೂರು: ದಿ. ಕುರ್ನಾಡು ಗುತ್ತು ಎಚ್. ರಾಮಯ್ಯ ನಾಯ್ಕ ಇವರ ಪತ್ನಿ ಚಂಚಲ ಆರ್ ನಾಯ್ಕ್ (80) ಕುರ್ನಾಡುವಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ನಾಯ್ಕ್ ಸಹಿತ ಎರಡು ಗಂಡು ಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅಮ್ಮೆಂಬಳ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮತ್ತು ಕುರ್ನಾಡು ಹಾಗೂ ಪಾಕೊಟ್ಟು ಕುಟುಂಬದ ದೈವಗಳ ಹಾಗೂ ನಾಗದೇವರ ಜೀರ್ಣೋದ್ಧಾರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕುರ್ನಾಡು ಪರಿಸರದಲ್ಲಿ ಜನಾನುರಾಗಿಯಗಿದ್ದುದಲ್ಲದೆ ಓರ್ವ ಪ್ರಗತಿಪರ ಕೃಷಿಕೆಯಾಗಿದ್ದರು.
ಯು. ಟಿ. ಖಾದರ್ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Next Story