ಕೊಂಬಿಲ ಉಗ್ಗಪ್ಪ ಶೆಟ್ಟಿ

ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಹಾಲಿ ನಿರ್ದೇಶಕ, ಅನಂತಾಡಿ ಗ್ರಾಮದ ಕೊಂಬಿಲ ಉಗ್ಗಪ್ಪ ಶೆಟ್ಟಿ(73) ಅವರು ಅಸೌಖ್ಯದಿಂದ ಎ.2ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅವರು ಅನಂತಾಡಿ-ನೆಟ್ಲಮುಡ್ನೂರು ವಲಯದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ರಾಗಿದ್ದರು. ಹಿರಿಯ ಸಹಕಾರಿ ಮತ್ತು ಎಸ್‌ಡಿಸಿಸಿ ಬ್ಯಾಂಕಿನಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಶಾಖಾ ಮೆನೇಜರ್, ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಟ್ಲ ಜೇಸಿಐ ಅಧ್ಯಕ್ಷರಾಗಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Next Story