ಸುಬ್ರಾಯ ದೇವಿದಾಸ ಕಾಮತ
ಭಟ್ಕಳ: ಸಮಾಜ ಸೇವಕ, ಶಿಕ್ಷಣ ಪ್ರೇಮಿ, ದಾನಿ ಎಂದೇ ಚಿರಪರಿಚಿತರಾದ ಭಟ್ಕಳ ಜಿಎಸ್ಬಿ ಸಮಾಜದ ಅಧ್ಯಕ್ಷ ಸುಬ್ರಾಯ ದೇವಿದಾಸ ಕಾಮತ(79) ಅವರು ಹೃದಯಸ್ತಂಭನದಿಂದ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸುಬ್ರಾಯ ಕಾಮತ ತಾಲೂಕಿನ ಹಲ್ಯಾಣಿಯಲ್ಲಿ ಕೃಷಿಕರಾಗಿ ಹಲವರ ಪಾಲಿನ ಅನ್ನದಾತರಾಗಿದ್ದರು. ಅಲ್ಲಿಯ ಸರ್ಕಾರಿ ಶಾಲೆಗೆ ತಮ್ಮ ಸ್ಥಳವನ್ನು ನೀಡಿ ಗ್ರಾಮೀಣ ಭಾಗದ ಜನರು ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಯ ನಿರ್ಮಾಣಕ್ಕೆ ಕಾರಣರಾಗಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡುವ ಮೂಲಕ ಹಲವು ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳು ನಿಯಮಿತ ವಾಗಿ ನಡೆಯುವಂತೆ ನೋಡಿಕೊಂಡಿದ್ದರು.
ಕೋವಿಡ್ ಸಂದರ್ಭ ಭಟ್ಕಳದಲ್ಲಿ ನೆರೆ ನೀರು ತುಂಬಿ ಹಾನಿಯಾದಾಗ ಸಮಾಜ ಬಾಂಧವರಿಗೆ ತನ್ನದೆ ಶೈಲಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಪ್ರಸ್ತುತ ಮಾರುತಿ ಕೋ.ಆಫರೇಟಿವ್ ಸೊಸೈಟಿಯಲ್ಲಿ ಉಪಾಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡು ಮಾರ್ಗದರ್ಶನ ನೀಡುತ್ತಿದ್ದರು.
ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಹಾಂಗ್ಯೋ ಐಸ್ಕ್ರೀಮ್ ಸಂಸ್ಥೆಯ ದಿನೇಶ ಪೈ, ಸತೀಶ ಪೈ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಹೂವು ಮಾರಾಟಗಾರರು, ವರ್ತಕ ಸಂಘದ ಪದಾಧಿಕಾರಿಗಳು ಸೇರಿ ಇತರ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.