ತಿಮ್ಮಪ್ಪ ಪಾಟ್ಕರ್ ನಿಧನ
ಶಿರ್ವ, ಜು.16: ಬಂಟಕಲ್ಲು ಸಮೀಪದ ಕೋಡುಗುಡ್ಡೆ ಜಿನಸು ವ್ಯಾಪಾರ ನಡೆಸುತ್ತಿದ್ದ ತಿಮ್ಮಪ್ಪ ಪಾಟ್ಕರ್(84) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಇವರು ಧಾರ್ಮಿಕ, ಸಾಮಾಜಿಕ ಕಾರ್ಯರ್ತರಾಗಿದ್ದು, ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮಂಡಳಿಯಲ್ಲಿ 20 ವರ್ಷಗಳ ಕಾಲ ಸದಸ್ಯರಾಗಿದ್ದರು.
ಇವರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story