ಯು.ಕೆ. ಅಬ್ಬಾಸ್ ಹಾಜಿ
ಮಂಗಳೂರು: ಉಳ್ಳಾಲದ ಕೋಟೆಪುರ ನಿವಾಸಿ ಐಎಸ್ಎಫ್ ಫಿಷರೀಸ್ ಮಾಲಕರಾಗಿರುವ ಯು.ಕೆ.ಅಬ್ಬಾಸ್ ಹಾಜಿ(78) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಮುಡಿಪುವಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಸೀಫುಡ್ ಬೈಯರ್ಸ್ ಅಸೋಸಿಯೇಶನ್ ನ ಸದಸ್ಯರಾಗಿರುವ ಅಬ್ಬಾಸ್ ಹಾಜಿ ಅವರು ಪತ್ನಿ , 9 ಮಂದಿ ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕಾಗಿ ಇಂದು ಸಂಜೆ ಉಳ್ಳಾಲದ ಕೋಟಪುರ ಜುಮಾ ಮಸೀದಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ದಫನ ಕಾರ್ಯ ರಾತ್ರಿ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ.
Next Story