ಉಸ್ಮಾನ್ ಕುಕ್ಕಾಡಿ ನಿಧನ
ಮಂಗಳೂರು : ಬೈಕಂಪಾಡಿಯ ಕೈಗಾರಿಕೋದ್ಯಮಿ ಉಸ್ಮಾನ್ ಕುಕ್ಕಾಡಿ (56) ಅಲ್ಪಕಾಲದ ಅನಾರೋಗ್ಯದ ನಂತರ ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಯುನೊ ಪ್ಯಾಕ್ ಇಂಡಸ್ಟ್ರೀಸ್ ಮತ್ತು ಪ್ಲಾಮ ಪ್ಲೈವುಡ್ ಸಂಸ್ಥೆಗಳ ಪಾಲುದಾರರಾಗಿದ್ದ ಇವರು ಡೆಪ್ಯುಟಿ ಗವರ್ನರ್ ಆಫ್ ರೋಟರಿ ಇಂಟರ್ನ್ಯಾಷನಲ್ ಆಗಿದ್ದರು.
ಜನಪ್ರಿಯ ಸಮಾಜ ಸೇವಕರಾಗಿದ್ದ ಇವರು ಸ್ಥಳೀಯ ಪ್ರಖ್ಯಾತ ಕುಕ್ಕಾಡಿ ಕುಟುಂಬದ ಸದಸ್ಯರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಸುರತ್ಕಲ್ ವಿದ್ಯಾದಾಯಿನಿ ಬಳಿ ಇರುವ ಇವರ ಸಹೋದರ ಅಬ್ದುಲ್ ಖಾದರ್ ಕುಕ್ಕಾಡಿಯವರ ಮನೆಯಲ್ಲಿ ಇಡಲಾಗಿದ್ದು, ಮಂಗಳವಾರ ಪೂರ್ವಾಹ್ನ 11 ಗಂಟೆಗೆ ಕೃಷ್ಣಾಪುರ 7ನೇ ಬ್ಲೋಕಿನ ಈದ್ಗಾ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Next Story