ವಳಚ್ಚಿಲ್: ವಿ.ಎಚ್ ಬಶೀರ್ ನಿಧನ
ಮಂಗಳೂರು: ಬಲ್ಮಠ ನಿವಾಸಿ ವಿ.ಎಚ್ ಬಶೀರ್ (56) ಅವರು ಕಿಡ್ನಿ ಸಂಬಂಧಿತ ಅನಾರೋಗ್ಯದಿಂದ ರವಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ವಳಚ್ಚಿಲ್ ನಿವಾಸಿಯಾಗಿರುವ ಬಶೀರ್ ಅವರು ಪ್ರಸ್ತುತ ಬಲ್ಮಠ ವಾಸ್ಲೇನ್ ನಲ್ಲಿ ವಾಸವಾಗಿದ್ದರು.
ಮೃತರು ಪತ್ನಿ, ಮೂವರು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವಳಚ್ಚಿಲ್ ಜುಮಾ ಮಸೀದಿಯ ದಫನಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story