ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ : ಸಚಿವ ರಾಮಲಿಂಗಾ ರೆಡ್ಡಿ
ಹುಬ್ಬಳ್ಳಿ: ಬಿಜೆಪಿ ಯವರು ಬರೀ ಸುಳ್ಳನ್ನೇ ಹೇಳ್ತಾರೆ. ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೇವಡಿ ಮಾಡಿದ್ದಾರೆ.
ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಬಿಜೆಪಿ ಅವರು 2019 ರಲ್ಲಿ ಆಪರೇಷನ್ ಮಾಡಿ ಅಧಿಕಾರ ಮಾಡಿದರು. ದೇಶದಲ್ಲಿ 450 ಕ್ಕಿಂತ ಹೆಚ್ಚು ಶಾಸಕರು, ಎಂಪಿಗಳನ್ನು ಆಪರೇಷನ್ ಮಾಡಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ 250 ಕ್ಕೂ ಹೆಚ್ಚು ಜನ ಪ್ರತಿನಿಧಿಗಳನ್ನು ಬಿಜೆಪಿಗೆ ಕರೆದುಕೊಂಡಿದ್ದಾರೆ ಎಂದರು.
ಸಿಎಂ ರೇಸ್ ನಲ್ಲಿರೋ ಸಚಿವರೇ 50 ಕೋಟಿ ಕೊಡಲು ಮುಂದಾಗಿದ್ದಾರೆ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರೀ ಸುಳ್ಳನ್ನೇ ಹೇಳ್ತಾರೆ. ಕರ್ನಾಟಕದಲ್ಲಿ ಈ ಬಾರಿ ಪ್ರಯತ್ನ ಮಾಡಿದ್ರು, ಸಕ್ಸಸ್ ಆಗಲಿಲ್ಲ.ಕಾಂಗ್ರೆಸ್ ನ ಯಾವ ಶಾಸಕರು ಹೋಗಲ್ಲ ಎಂದರು.
ಕೋವಿಡ್ ಹಗರಣ ಎಸ್ ಐ ಟಿ ಗೆ ಕೊಡುವ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ, ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ 5900 ಕೋಟಿ ಸಾಲ ಮಾಡಿಟ್ಟು ಹೋಗಿದೆ. ಈಗ ಸುಧಾರಣೆ ಮಾಡುತ್ತಿದ್ದೇವೆ ನಷ್ಟದಲ್ಲಿರುವ ವಾಯುವ್ಯ ಸಾರಿಗೆಗೆ ನೆರವು ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.