ಧಾರವಾಡ | ನಿದ್ರೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದ ತಂದೆ : ಚಿಕಿತ್ಸೆ ಫಲಿಸದೆ ಮಗು ಸಾವು
ಧಾರವಾಡ: ಮಗು ತನ್ನ ನಿದ್ದೆಯನ್ನು ಹಾಳು ಮಾಡುತ್ತಿದೆ ಎಂದು ಕೋಪಗೊಂಡ ತಂದೆಯೊಬ್ಬ ತನ್ನದೇ ಒಂದು ವರ್ಷದ ಮಗುವನ್ನು ಗೋಡೆಗೆ ಎಸೆದು ಕೊಲೆ ಮಾಡಿರುವ ಹೀನ ಕೃತ್ಯ ಧಾರವಾಡದಲ್ಲಿ ನಡೆದಿದೆ.
ಒಂದು ವರ್ಷದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ತಂದೆಯನ್ನು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಂಭುಲಿಂಗಯ್ಯ ಶಾಪೂರಮಠ ಎಂದು ಗುರುತಿಸಲಾಗಿದ್ದು, ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story