ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಅವರನ್ನು ಬದಲಿಸಲು ಬಿಜೆಪಿಗೆ ಮಠಾಧೀಶರ ಒತ್ತಾಯ
ಬಿಜೆಪಿಗೆ ಮಾ.31ರವರೆಗೆ ಗಡುವು, ಎ.2ಕ್ಕೆ ಮುಂದಿನ ನಿರ್ಧಾರ : ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಬೇಕು. ಈ ಕುರಿತು ಮಾ.31ರೊಳಗೆ ತೀರ್ಮಾನವಾಗದಿದ್ದರೆ, ಎ. 2ರಂದು ಅಂತಿಮ ನಿರ್ಧಾರ ಕೈಗೊಳ್ಳಲು ತಿರ್ಮಾನಿಸಲಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಇಂದು ಇಲ್ಲಿನ ಮೂರಸಾವಿರಮಠದಲ್ಲಿ ನಡೆದ ಮಠಾಧೀಶರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ನೂರಾರು ಜನ ಮಠಾಧೀಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು, ಅವರಿಗೆ ಅಭಿನಂದನೆ. ಧಾರವಾಡ ಲೋಕಸಭೆ ಟಿಕೆಟ್ ಬದಲಾವಣೆ ಮಾಡಬೇಕು. ಇದನ್ನು ನಾವು ಹೈಕಮಾಂಡ್ ಗೆ ತಿಳಿಸುತ್ತೇವೆ ಎಂದರು.
ಜಿಲ್ಲೆಯಲ್ಲಿ ಲಿಂಗಾಯತರು ಬಹು ಸಂಖ್ಯಾತರಾಗಿದ್ದು, ನಾನು ಮೂರು ವರ್ಷದಿಂದ ಜೋಶಿ ಅವರ ವಿಚಾರವಾಗಿ ಬಹಳ ನೊಂದಿದ್ದೇನೆ. ಜೋಶಿ ಅವರು ಸೇಡಿನ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಕಣಕ್ಕಿಳಿಯಲು ಸಿದ್ದ‘ಅನಿವಾರ್ಯವಾದರೆ ಲೋಕಸಭೆ ಚುನಾವಣೆಗೆ ಸ್ವತಂತ್ರ ಸ್ಪರ್ಧೆಗೂ ಸಿದ್ಧ.ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕೆ ವಿನಃ ತುಳಿದು ರಾಜಕಾರಣ ಮಾಡುವುದಲ್ಲ. ಸಮಾಜದ ಹಲವು ಸಮಸ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ’ ಎಂದು ಅವರು ಹೇಳಿದರು.