ಪತ್ರಕರ್ತ ವೆಂಕಟೇಶ ಸಂಪ ಅವರಿಗೆ "ಬೇಂದ್ರೆ ನುಡಿ ಸಿರಿ" ಪ್ರಶಸ್ತಿ ಪ್ರದಾನ
ಧಾರವಾಡ : ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಚೇತನ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನೀಡುವ ರಾಜ್ಯ ಮಟ್ಟದ "ಬೇಂದ್ರೆ ನುಡಿ ಸಿರಿ ಪ್ರಶಸ್ತಿ"ಯನ್ನು ಕರ್ನಾಟಕ ವಿಶ್ವ ವಿದ್ಯಾನಿಲಯದ ಕನಕ ಭವನದಲ್ಲಿ ಪತ್ರಕರ್ತ ವೆಂಕಟೇಶ ಎಸ್.ಸಂಪ ಅವರಿಗೆ ಪ್ರದಾನ ಮಾಡಲಾಯಿತು.
ಮೂರು ದಿನಗಳ ಧಾರವಾಡ ನುಡಿ ಸಡಗರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪತ್ರಿಕೋದ್ಯಮದ ಸಾಧನೆಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪತ್ರಕರ್ತ ವೆಂಕಟೇಶ ಸಂಪ ಅವರು ಸಂಪದ ಸಾಲು ಪತ್ರಿಕೆಯನ್ನು ಕಳೆದ 17 ವರ್ಷಗಳಿಂದ ನಡೆಸುತ್ತಿದ್ದಾರೆ. ಇವರ ಕತೆ, ಕವನ, ಲೇಖನಗಳು ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಟಿವಿ, ರೇಡಿಯೋಗಳಲ್ಲಿ ವೆಂಕಟೇಶ ಸಂಪ ಅವರ ಕಾರ್ಯಕ್ರಮಗಳು ಪ್ರಸಾರವಾಗಿದೆ. ಹಲವು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಾವಯವ ಕೃಷಿ, ರಕ್ತದಾನ , ಪ್ರಕೃತಿ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಸೇರಿದಂತೆ ಬಹುಮುಖ ಪ್ರತಿಭೆಯ ವೆಂಕಟೇಶ ಸಂಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದು ಸಂಚಾಲಕ ಚಂದ್ರಶೇಖರ್ ಮಾಡಲಗೇರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಹಿತಿಗಳಾದ ಶಶಿಧರ ನರೇಂದ್ರ, ಯೋಗೇಶ್ ಮಾಸ್ಟರ್, ಕರ್ನಾಟಕ ವಿಶ್ವ ವಿದ್ಯಾನಿಲಯದ ಸಂಯೋಜಕರಾದ ಡಾ.ಹನುಮೇಗೌಡ.ಸಿ, ಚೇತನಾ ಫೌಂಡೇಶನ್‌ನ ಚಂದ್ರಶೇಖರ್, ಇತರರು ಹಾಜರಿದ್ದರು.