ಉದ್ಯೋಗದ ಹಕ್ಕಿಗಾಗಿ ಯುವಜನರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ: ಸುನಿಲ್ ಕುಮಾರ್ ಬಜಾಲ್
ದೇರಳಕಟ್ಟೆ: DYFI ಮೊಂಟೆಪದವು ಘಟಕದ ಸಂಗಾತಿಗಳಿಗೆ ಸಂಘಟನಾ ಕಾರ್ಯಾಗಾರವನ್ನು ಮೊಂಟೆಪದವಿನ DYFI ಕಛೇರಿಯಲ್ಲಿ ಅ. 22 ಮಂಗಳವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ DYFI ಮಾಜಿ ರಾಜ್ಯಧ್ಯಕ್ಷ ಕಾಂ. ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಯುವ ಜನರು ಶಿಕ್ಷಣ ಮುಗಿದ ನಂತರ ಉದ್ಯೋಗ ಇಲ್ಲದೆ ಬೇರೆ ಬೇರೆ ಕ್ರಿಮಿನಲ್ ಚಟುವಟಿಕೆಯ ತೊಡಗಿಸಿಕೊಂಡಿದ್ದಾರೆ. ಇದಕ್ಕೆಲ್ಲ ಇಲ್ಲಿಯ ಸರಕಾರವೇ ಹೊಣೆ. ಯುವಜನರು ಒಗ್ಗಟ್ಟಾಗಿ ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಬೇರೆ ಬೇರೆ ಕಂಪೆನಿಗಳಲ್ಲಿ ಸ್ಥಳೀಯ ಯುವಕರಿಗೆ ಕೆಲಸಗಳು ನೀಡುತ್ತಿಲ್ಲ ಈ ಎಲ್ಲಾ ತಾರತಮ್ಯಗಳ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ DYFI ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ ಸಂಘಟನಾ ವಿಚಾರದ ಬಗ್ಗೆ ಮಾತನಾಡಿದರು.
DYFI ಮೊಂಟೆಪದವು ಘಟಕದ ಅಧ್ಯಕ್ಷ ಶರೀಫ್ KA ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. DYFI ಉಳ್ಳಾಲ ತಾಲೂಕು ಸಮಿತಿ ಸದಸ್ಯರಾದ ಸಿರಾಜ್ BM ಸ್ವಾಗತಿಸಿದರು. DYFI ಉಳ್ಳಾಲ ತಾಲೂಕು ಉಪಾಧ್ಯಕ್ಷ ರಝಾಕ್ ಮುಡಿಪು ಜೊತೆಗಿದ್ದರು.