ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ನಾಳೆ ಗದಗ ಬಂದ್ ಕರೆ
ಗದಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ಕಲಾಪದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಇದೇ ಡಿ.24ರಂದು ಗದಗ ಬಂದ್‌ಗೆ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಲಾಗಿದೆ.
ಅಮಿತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆಯಿಂದ ಇಡೀ ದೇಶದ ದಲಿತರ ಹಾಗೂ ಪ್ರಗತಿಪರರ ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ಖಂಡಿಸಿ ಇದೇ ಡಿ.24 (ಮಂಗಳವಾರ)ದಂದು ಗದಗ ಬಂದ್‌ಗೆ ಪ್ರಗತಿಪರ ಸಂಘಟನೆ ಒಕ್ಕೂಟ ಕರೆ ಕೊಟ್ಟಿದೆ.
ಈ ಸಂಬಂಧ ನಡೆದ ಸಭೆಯಲ್ಲಿ ದಲಿತ ಮುಖಂಡರಾದ ಅಯ್ಯಪ್ಪ ನಾಯ್ಕರ, ಬಸವರಾಜ ಕಡೇಮನಿ, ವಿಜಯ ಮುಳಗುಂದ, ಆನಂದ ಶಿಂಗಾಡಿ, ಶೇಕಣ್ಣ ಕವಳಿಕಾಯಿ, ಹನುಮಂತಪ್ಪ ಕಿನ್ನಾಳ, ಶಾಂತಣ್ಣ ಮಾಳವಾಡ, ಎಸ್.ಜಿ.ಕೊಪ್ಪಳ, ನಿಸಾರ್ ಅಹ್ಮದ್ ಖಾಜಿ, ಭಾಷಾಸಾಭ್ ಮುಲ್ಲಸಮುದ್ರ, ಬಾಲರಾಜ್ ಅರಬರ, ನಾಗರಾಜ್ ಗೋಕಾವಿ, ಮಲ್ಲೇಶ್ ಹೊಸಮನಿ, ಬಸವರಾಜ ಬೇವಿನಮರದ, ಮೈಲಾರಪ್ಪ ಚಳ್ಳಮರದ, ಪರಮೇಶ್ ಕಾಳೆ, ರಾಘವೇಂದ್ರ ಪರಾಪೂರ,ಗಣೇಶ ಹುಬ್ಬಳ್ಳಿ, ಇತರರು ಉಪಸ್ಥಿತರಿದ್ದರು.
Next Story