Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಬಹುಜನರು ಮರೆಯಬಾರದ ಕಾನ್ಶಿರಾಂ

ಬಹುಜನರು ಮರೆಯಬಾರದ ಕಾನ್ಶಿರಾಂ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್17 March 2025 12:11 PM IST
share
ಬಹುಜನರು ಮರೆಯಬಾರದ ಕಾನ್ಶಿರಾಂ
ಒಂದು ಕಾಲಕ್ಕೆ ವೇಗವಾಗಿ ಬೆಳೆಯುತ್ತಾ ರಾಜಕೀಯ ಪಲ್ಲಟಗಳನ್ನು ಸೃಷ್ಟಿಸಿದ್ದ ಬಹುಜನ ಸಮಾಜ ಪಕ್ಷಕ್ಕೆ ಇವತ್ತು ದಾದಾ ಸಾಹೇಬ್ ಕಾನ್ಶಿರಾಂ ಅವರ ನೆನಪುಗಳು ಹೊಸ ಸ್ಫೂರ್ತಿ ಉಕ್ಕಿಸಬಲ್ಲವೆ? ಕಾನ್ಶಿರಾಂ ಅವರ ಬದುಕು, ಹಾದಿ, ಚಿಂತನೆ, ರಾಜಕಾರಣಗಳು ಬಹುಜನ ವರ್ಗಗಳಲ್ಲಿ ತಾತ್ವಿಕ ಐಕ್ಯತೆಯನ್ನು ಹುಟ್ಟು ಹಾಕಿ, ಬಹುಜನರನ್ನು ಸಾಂಸ್ಕೃತಿಕ ಹಾಗೂ ರಾಜಕೀಯ ಅಧಿಕಾರದೆಡೆಗೆ ಒಯ್ಯಬಲ್ಲವೆ?

ಕೇವಲ ಹತ್ತು ವರ್ಷಗಳ ಕೆಳಗೆ ಭಾರತದ ಮುಖ್ಯ ರಾಜಕೀಯ ಪಕ್ಷವಾಗಿದ್ದ ಬಹುಜನ ಸಮಾಜ ಪಕ್ಷ ಭಾರತದ ರಾಜಕೀಯ ಭೂಪಟದಲ್ಲಿ ತನ್ನ ಹಳೆಯ ಸ್ಥಾನ ಕಳೆದುಕೊಳ್ಳತೊಡಗಿದೆ. ಈ ಹಿನ್ನೆಲೆಯಲ್ಲಿ ಮೊನ್ನೆಯ ಮಾರ್ಚ್ ಹದಿನೈದರಂದು ಕಾನ್ಶಿರಾಂ ಅವರ ತೊಂಭತ್ತೊಂದನೆಯ ಹುಟ್ಟುಹಬ್ಬವನ್ನು ಉತ್ಸಾಹದಿಂದ ಆಚರಿಸಲು ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ ಕರೆಕೊಟ್ಟಿದ್ದರು. ನಂತರ ಮಾಧ್ಯಮಗಳಲ್ಲಿ ಈ ಉತ್ಸಾಹ ಕುರಿತ ಸುದ್ದಿಯೇನೂ ಕಂಡಂತಿಲ್ಲ. ಕಾನ್ಶಿರಾಂ ಅವರ ಹುಟ್ಟು ಹಬ್ಬದ ದಿನ ಮಾಯಾವತಿ ಜಾತಿ ಜನಗಣತಿಯ ಅಗತ್ಯ ಕುರಿತು ಮಾತಾಡಿದರು; ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕೂಡ ಕಾನ್ಶಿರಾಂ ಅವರ ಮಹತ್ವವನ್ನು ನೆನೆದರು.

ಆದರೆ ಕಾನ್ಶಿರಾಂ ಸೃಷ್ಟಿಸಿದ ಅಂಬೇಡ್ಕರೋತ್ತರ ಮಹಾನ್ ರಾಜಕೀಯ ಅಲೆ ಮರುಕಳಿಸಬಲ್ಲದೆ? ಯಾವುದೇ ಅಲೆ ಬೇಗ ಕಣ್ಮರೆಯಾಗಿ ಮತ್ತೊಂದು ಅಲೆ ಸೃಷ್ಟಿಯಾಗುವುದು ಈ ಆಧುನಿಕೋತ್ತರ ಮಾರ್ಕೆಟ್ ಯುಗದ ಮುಖ್ಯ ಲಕ್ಷಣ. ಈ ಯುಗದಲ್ಲಿ ಭಾರತದ ರಾಜಕಾರಣದ ಚಿತ್ರಗಳು ಕೂಡ ವೇಗವಾಗಿ ಬದಲಾಗ

ತೊಡಗಿವೆ. ಬಿಎಸ್‌ಪಿಯನ್ನು ಕಟ್ಟಿದ ದಾದಾಸಾಹೇಬ್ ಕಾನ್ಶಿರಾಂ (15 ಮಾರ್ಚ್ 1934-9ಅಕ್ಟೋಬರ್ 2006) ಎಂಭತ್ತು-ತೊಂಭತ್ತರ ದಶಕದಲ್ಲಿ ಹೊಸ ರಾಜಕೀಯ ಅಲೆಯನ್ನೇ ಸೃಷ್ಟಿಸಿದ್ದು ಕೂಡ ಚರಿತ್ರೆಯ ಭಾಗವಾಗತೊಡಗಿದೆ. ಅವರ ತೊಂಭತ್ತೊಂದನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಬಹುಜನ ಸಮಾಜ ಪಕ್ಷ ತನ್ನ ಈಗಿನ ಇಳಿಮುಖತೆ ಓಟವನ್ನು ತಡೆಯಬಲ್ಲದೆ? ಕಾನ್ಶಿರಾಂ ಅವರ ಹುಟ್ಟುಹಬ್ಬದ ನೆಪದಲ್ಲಿ ಅವರ ಬದುಕಿನ ಕೆಲವು ವಿವರಗಳನ್ನು ನನ್ನ ಪುಸ್ತಕವೊಂದರಿಂದ ಕೊಡುತ್ತಿರುವೆ. ಈ ವಿವರಗಳು ಬದ್ರಿನಾರಾಯಣ್ ಅವರ ‘ಕಾನ್ಶಿರಾಂ: ಲೀಡರ್ ಆಫ್ ದಿ ದಲಿತ್ಸ್’ ಪುಸ್ತಕಕ್ಕೆ ಋಣಿಯಾಗಿವೆ.

ಪಂಜಾಬಿನಲ್ಲಿದ್ದ ಕಾನ್ಶಿರಾಂರ ಪೂರ್ವಿಕರು ಚಮ್ಮಾರ ಜಾತಿಯಿಂದ ಸಿಖ್ ಧರ್ಮಕ್ಕೆ ಸೇರಿದ್ದರಿಂದ ಎಳವೆಯಲ್ಲಿ ಕಾನ್ಶಿರಾಂಗೆ ಅಸ್ಪಶ್ಯತೆಯ ಭೀಕರ ಅನುಭವವಾಗಲಿಲ್ಲ. ಆದರೂ ಜಾತಿಯ ಅವಮಾನದ ನೆರಳು ಈ ಬಾಲಕನ ಮೇಲೆ ಹಾಯುತ್ತಲೇ ಇತ್ತು. ಒಮ್ಮೆ ಬಾಲಕ ಕಾನ್ಶಿರಾಂ ಹೋಟೆಲೊಂದರಲ್ಲಿ ಕೂತಿದ್ದಾಗ ಇಬ್ಬರು ಜಮೀನ್ದಾರರು ತಮ್ಮ ಚಮ್ಮಾರ ಆಳುಗಳಿಗೆ ಹೇಗೆ ಹೊಡೆದೆವೆಂದು ಕೊಚ್ಚಿ ಕೊಳ್ಳುತ್ತಿದ್ದರು. ಸಿಟ್ಟಾದ ಕಾನ್ಶಿರಾಂ ಅಲ್ಲಿದ್ದ ಕುರ್ಚಿಗಳನ್ನು ಎತ್ತಿ ಅವರ ಮೆಲೆ ಬೀಸಿದ. ಒಳ್ಳೆಯ ಆಟಗಾರನಾಗಿದ್ದ ಹುಡುಗ ಕಾನ್ಶಿರಾಂ ಚೆನ್ನಾಗಿ ಓದುತ್ತಿದ್ದ. ಸುಂದರ ತರುಣನಾಗಿ ಬೆಳೆದ ಅವನನ್ನು ಯಾರೋ ಸಿನೆಮಾದಲ್ಲಿ ನಟಿಸಲು ಕೂಡ ಕೇಳಿದ್ದರು! ಒಲ್ಲೆನೆಂದ ಕಾನ್ಶಿರಾಂ ವಿಜ್ಞಾನದ ವಿದ್ಯಾರ್ಥಿಯಾದರು; ನಂತರ ಸಂಶೋಧಕರಾಗಿ ಕೆಲಸಕ್ಕೆ ಸೇರಿಕೊಂಡರು.

ಅಂಬೇಡ್ಕರ್ ತೀರಿಕೊಂಡ ಮೇಲೆ ಕಾನ್ಶಿರಾಂ ಅಂಬೇಡ್ಕರ್ ಪುಸ್ತಕಗಳನ್ನು ಓದತೊಡಗಿದರು. ಅವರು ಕೆಲಸ ಮಾಡುತ್ತಿದ್ದ ಆಫೀಸಿನವರು ಒಮ್ಮೆ ಬುದ್ಧ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಗೆ ರಜೆ ರದ್ದು ಮಾಡಿ ತಿಲಕ್ ಮತ್ತು ಗೋಖಲೆ ಜಯಂತಿಗಳಿಗೆ ರಜೆ ಘೋಷಿಸಿದರು. ಇದನ್ನು ಪ್ರತಿಭಟಿಸಿದ ಆಫೀಸಿನ ನಾಲ್ಕನೇ ದರ್ಜೆಯ ನೌಕರ ಭಂಗಿ ಸಮುದಾಯದ ದಿನಭಾನ್ ಕೆಲಸ ಕಳೆದುಕೊಂಡ. ದಿನಭಾನ್ ದುಗುಡದಿಂದ ಕಚೇರಿಯಿಂದ ಹೊರಹೋಗುತ್ತಿದ್ದುದನ್ನು ಕಂಡ ಕಾನ್ಶಿರಾಂ ‘ಮುಂದೇನು ಮಾಡುತ್ತೀಯ?’ ಎಂದು ಅವನನ್ನು ಕೇಳಿದರು. ದಿನಭಾನ್ ‘ಕೋರ್ಟಿಗೆ ಹೋಗುತ್ತೇನೆ’ ಎಂದ. ಕಾನ್ಶಿರಾಂ ಅವನ ಕೋರ್ಟಿನ ವೆಚ್ಚ ನೋಡಿಕೊಂಡರು; ಅಧಿಕಾರಿಗಳಿಗೆ, ಮಂತ್ರಿಗಳಿಗೆ ಈ ಪ್ರಕರಣವನ್ನು ವಿವರಿಸಿದರು. ನಾಲ್ಕನೇ ದರ್ಜೆಯ ನೌಕರರನ್ನು ಸಂಘಟಿಸಿದರು. ದೂರನ್ನು ರಕ್ಷಣಾ ಮಂತ್ರಿ ಚವ್ಹಾಣರವರೆಗೂ ಒಯ್ದರು. ದಿನಭಾನ್ ಮತ್ತೆ ನೌಕರಿ ಪಡೆದ. ಬುದ್ಧಜಯಂತಿ, ಅಂಬೇಡ್ಕರ್ ಜಯಂತಿಗಳ ರಜೆಗಳು ಮರಳಿ ಬಂದವು!

ಈ ಘಟನೆ ಕಾನ್ಶಿರಾಂಗೆ ಸಂಘಟನೆಯ ಅನಿವಾರ್ಯತೆಯನ್ನು ಕಲಿಸಿಕೊಟ್ಟಿತು. ಆಗ ‘ಬಾಮ್ಸೆಫ್’ (ಬ್ಯಾಕ್ವರ್ಡ್ ಆ್ಯಂಡ್ ಮೈನಾರಿಟಿ ಕಮ್ಯುನಿಟೀಸ್ ಎಂಪ್ಲಾಯೀಸ್ ಫೆಡರೇಷನ್) ರೂಪಿಸಿದ ಕಾನ್ಶಿರಾಂ ಮುಂದೆ ‘ಡಿಎಸ್‌ಫೋರ್’ (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ) ಸಂಘಟನೆಯನ್ನೂ ಹುಟ್ಟು ಹಾಕಿದರು. ಕುಟುಂಬದ ಜೊತೆ ಸಂಪರ್ಕ ಕಡಿದು ಕೊಂಡ ಕಾನ್ಶಿರಾಂ ಮದುವೆಯಾಗದೇ ಉಳಿದರು. ಅಂಬೇಡ್ಕರ್ ಪುಸ್ತಕಗಳನ್ನು ಆಳವಾಗಿ ಗ್ರಹಿಸಿ, ಸುತ್ತಣ ಸಮಾಜವನ್ನು ನೋಡಿ ಜಾತಿಮೂಲದ ದಮನಗಳನ್ನು ಅರಿಯತೊಡಗಿದರು. ಮಗನನ್ನು ಮತ್ತೆ ಮನೆಗೆ ಕರೆದೊಯ್ಯಲು ಪುಣೆಗೆ ಬಂದ ತಾಯಿ, ರಾತ್ರಿಯಿಡೀ ಅಂಬೇಡ್ಕರ್ ಪುಸ್ತಕಗಳನ್ನು ಓದುತ್ತಿದ್ದ ಮಗನನ್ನು ಕೇಳಿದರು: ‘ಕಾಷಿಯಾ, ಅದೇನು ಓದುತ್ತಿದ್ದೀಯ? ಅದರಲ್ಲಿ ಅಂಥಾದ್ದೇನಿದೆ?’

ಮಗ ಹೇಳಿದ: ‘ಅಮ್ಮಾ! ಇದರಲ್ಲಿದೆ ರಾಜ್ಯಾಧಿಕಾರ ಹಿಡಿಯುವ ಮಾಸ್ಟರ್ ಕೀ!’

ಕಾನ್ಶಿರಾಂ ತಮ್ಮ ಅಧಿಕಾರಿ ಹುದ್ದೆ ಕೈಬಿಟ್ಟು, ಅಂಬೇಡ್ಕರ್ ರೂಪಿಸಿದ ಕ್ರಾಂತಿಕಾರಿ ಚಿಂತನೆಯನ್ನು ಮೂರು ದಶಕಗಳಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅಧಿಕಾರ ಪಡೆವ ರಾಜಕೀಯ ಸಾಧನವನ್ನಾಗಿ ವಿಸ್ತರಿಸಿದ ರೀತಿ ಅದ್ಭುತವಾದುದು. ವಿಜ್ಞಾನಿಯಾಗಿದ್ದ ಕಾನ್ಶಿರಾಂ ವ್ಯವಸ್ಥಿತವಾಗಿ ಚಿಂತಿಸಿ, ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಬಹುಜನಸಮಾಜ ಪಕ್ಷವನ್ನು ಕಟ್ಟಿ ಬೆಳೆಸಿದರು; ಬಾಮ್ಸೆಫ್ ಮೂಲಕ ಪಕ್ಷದ ತಾತ್ವಿಕತೆ, ಯೋಜನೆ ಹಾಗೂ ಹಣಕಾಸಿನ ನಿರ್ವಹಣೆ ಮಾಡಿದರು. ಪಕ್ಷದ ಸಭೆಯನ್ನು ಏರ್ಪಡಿಸಲು ಬರುವವರಿಗೆ ಅವರ ಷರತ್ತುಗಳು: ‘ಸಭೆಗೆ ಹನ್ನೆರಡು ಸಾವಿರ ಜನ; ಪಕ್ಷಕ್ಕೆ ಹನ್ನೆರಡು ಸಾವಿರ ರೂಪಾಯಿ. ಸಭೆಗೆ ಮೂರು ಮೈಲಿ ದೂರದಲ್ಲಿ

ಸೈಕಲ್ ಬಿಟ್ಟು ಯಾವ ವಾಹನವೂ ಇರಬಾರದು’.

ಕೆಲವು ದಿನ ಅವರು ಮೂರು ಸಭೆಗಳಲ್ಲಿ ಮಾತಾಡಿ ಮೂವತ್ತಾರು ಸಾವಿರ ರೂಪಾಯಿಗಳನ್ನು ಪಕ್ಷಕ್ಕಾಗಿ ಸಂಗ್ರಹಿಸುತ್ತಿದ್ದರು.

ಆಗ ಸೈಕಲ್ ಮೇಲೆ ಊರೂರು ಸುತ್ತುತ್ತಿದ್ದ ಕಾನ್ಶಿರಾಂ ಕಾರ್ಯಕರ್ತರ ಮನೆಯಲ್ಲಿ ಉಂಡು ಅಲ್ಲೇ ಮಲಗುತ್ತಿದ್ದರು. ಶ್ರೀಮಂತ ಪಕ್ಷಗಳ ಕಾರು, ಜೀಪುಗಳ ಭರಾಟೆಯೆದುರು ಬಿಎಸ್‌ಪಿಯ ಕಾರ್ಯಕರ್ತರು ಸೈಕಲ್ ಬಳಸಬೇಕೆಂದು ಹೇಳುತ್ತಿದ್ದರು. ಕಾನ್ಶಿರಾಂಗೆ ಸೈಕಲ್ ಜೊತೆಗೆ ಹರೆಯದ ಭಾವನಾತ್ಮಕ ನಂಟು ಕೂಡ ಇತ್ತು. ಅವರು ಪುಣೆಯಿಂದ ಮುಂಬೈಗೆ ಬಂದು ಸಂಘಟನೆ ಮಾಡುತ್ತಿದ್ದ ಕಾಲದಲ್ಲಿ ಪ್ರತಿದಿನ ಗೆಳೆಯ ಮನೋಹರ್ ಅತೆಯವರ ಜೊತೆ ಸೈಕಲ್ ತುಳಿದು ಪುಣೆ ರೈಲ್ವೆ ಸ್ಟೇಷನ್‌ನಲ್ಲಿ ಸೈಕಲ್ ಬಿಟ್ಟು, ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ಹತ್ತಿ ಮುಂಬೈ ತಲುಪುತ್ತಿದ್ದರು. ಮತ್ತೆ ಸಂಜೆ ಮುಂಬೈನಿಂದ ಪುಣೆ ತಲುಪಿ ಸೈಕಲ್ ತುಳಿದು ಹದಿನೈದು ಮೈಲು ದೂರದಲ್ಲಿದ್ದ ಸಂಘಟನೆಯ ಆಫೀಸ್ ತಲುಪುತ್ತಿದ್ದರು. ಒಂದು ಸಂಜೆ ಗೆಳೆಯರಿಬ್ಬರ ಬಳಿಯೂ ಹಣವಿರಲಿಲ್ಲ. ಊಟವಿಲ್ಲದೆ ಹಾಗೇ ಮಲಗಿದರು. ಬೆಳಗ್ಗೆ ಎದ್ದು ಮುಂಬೈಗೆ ಹೊರಟ ಕಾನ್ಶಿರಾಂ, ‘ದುಡ್ಡಿದೆಯಾ?’ ಎಂದು ಗೆಳೆಯನನ್ನು ಕೇಳಿದರು. ಅತೆಯ ಬಳಿ ದುಡ್ಡಿರಲಿಲ್ಲ. ಕಾನ್ಶಿರಾಂ ಅಸಹಾಯಕರಾಗಿ ‘ಸೈಕಲ್ಲಿಗೆ ಬ್ಲೋ ಹೊಡೆಸಲು ಒಂದೈದು ಪೈಸೆ ಆದ್ರೂ ಇದ್ರೆ ನೋಡು’ ಎಂದರು. ಅದೂ ಇರಲಿಲ್ಲ. ಗೆಳೆಯನ ಚಕ್ರದಲ್ಲೂ ಗಾಳಿಯಿರಲಿಲ್ಲ. ಟ್ರೈನ್ ತಪ್ಪೀತೆಂದು ಕಾನ್ಶಿರಾಂ ರೈಲ್ವೆ ಸ್ಟೇಷನ್ನಿನತ್ತ ಓಡತೊಡಗಿದರು.

ಮುಂದೆ ಕಾನ್ಶಿರಾಂ ರಾಜಕೀಯ ಪಕ್ಷ ಕಟ್ಟಿದಾಗ ಆನೆಯನ್ನು ತಮ್ಮ ಪಕ್ಷದ ಸಂಕೇತವಾಗಿರಿಸಿಕೊಂಡರು. ಸಾಹಿತಿ, ಕಲಾವಿದರ ಜೊತೆ ಕೂತ ಕಾನ್ಶಿರಾಂ ಚರಿತ್ರೆಯಲ್ಲಿ ಹೂತುಹೋದ ಕೆಳಜಾತಿಗಳ ಸಾಂಸ್ಕೃತಿಕ ನಾಯಕ, ನಾಯಕಿಯರನ್ನು ಕುರಿತ ಹಾಡು, ಕತೆ ಬರೆಸುತ್ತಿದ್ದರು. ದಲಿತರ ಮೇಲೆ ನಡೆದ ದೌರ್ಜನ್ಯಗಳ ಪತ್ರಿಕಾ ವರದಿಗಳನ್ನು ಟ್ರಂಕಿನಲ್ಲಿ ತುಂಬಿಕೊಂಡು ಹೋಗಿ ಸಭೆಯ ಸುತ್ತ ಪ್ರದರ್ಶಿಸುತ್ತಿದ್ದರು. ‘ಜೈರಾಮ್’ಗೆ ಪ್ರತಿಯಾಗಿ ‘ಜೈ ಭೀಮ್’ ನಮಸ್ಕಾರವನ್ನು ಜನಪ್ರಿಯಗೊಳಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಜಾತಿಗಳು ತಮ್ಮ ಪಾಲು ಪಡೆಯಬೇಕು ಎಂದ ಅವರು, ಅಧಿಕಾರ ಪಡೆಯದ ಸಣ್ಣಪುಟ್ಟ ಜಾತಿಗಳಿಗೆ ಅಧಿಕಾರದ ಸಾಧ್ಯತೆ ತೋರಿಸಿದರು. ಇತರ ರಾಜಕೀಯ ಪಕ್ಷಗಳ ಚಮಚಾಗಿರಿ ಮಾಡುವುದನ್ನು ಬಿಡಬೇಕೆಂಬುದನ್ನು ಬಹುಜನರಿಗೆ ಕಲಿಸಿದರು.

ಮುಂದೆ ಉತ್ತರಪ್ರದೇಶದಲ್ಲಿ ಬಿಜೆಪಿ ಬೆಂಬಲದಿಂದ ಬಿಎಸ್‌ಪಿ ಅಧಿಕಾರ ಹಿಡಿಯುವ ಘಟ್ಟದಲ್ಲಿ ಕಾನ್ಶಿರಾಂರ ಆರೋಗ್ಯ ಕುಸಿಯತೊಡಗಿತ್ತು. ತಾವು ಭವಿಷ್ಯದ ನಾಯಕಿಯಾಗಿ ಬೆಳೆಸಿದ್ದ ಮಾಯಾವತಿಯವರನ್ನೇ ಕಾನ್ಶಿರಾಂ ಮುಖ್ಯಮಂತ್ರಿಯಾಗಿಸಿದರು. ಮುಂದೊಮ್ಮೆ ವಾಜಪೇಯಿ ಕಾನ್ಶಿರಾಮರನ್ನು ರಾಷ್ಟ್ರಪತಿ ಹುದ್ದೆಗೆ ಆಹ್ವಾನಿಸಿದಾಗ, ‘ಒಲ್ಲೆ, ನಾನು ಪ್ರಧಾನಮಂತ್ರಿಯಾಗುವೆ’ ಎನ್ನುವಷ್ಟು ಎತ್ತರಕ್ಕೆ ಕಾನ್ಶಿರಾಂ ಬೆಳೆದಿದ್ದರು. ಬಿಎಸ್‌ಪಿ ಅದೇ ವೇಗದಲ್ಲಿ ಬೆಳೆದಿದ್ದರೆ ಅದೇನೂ ಅಂಥ ದೂರದ ಗುರಿಯಾಗುತ್ತಿರಲಿಲ್ಲ. ಅಂಬೇಡ್ಕರ್ ಚಿಂತನೆಗಳನ್ನು ಅಧಿಕಾರ ರಾಜಕಾರಣದ ನೆಲೆಯಲ್ಲಿ ವಿಸ್ತರಿಸಿದ ಕಾನ್ಶಿರಾಂ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ದಾದಾಸಾಹೇಬ್ ಎನ್ನುತ್ತಿದ್ದರು. ಮೂರು ವರ್ಷ ಮೆದುಳಿನ ಸ್ಟ್ರೋಕ್‌ನಿಂದ ನವೆದ ಮಾನ್ಯವರ್ ಕಾನ್ಶಿರಾಂ 2006ರ ಅಕ್ಟೋಬರ್ 9ರಂದು ತೀರಿಕೊಂಡರು. ಅಷ್ಟು ಹೊತ್ತಿಗೆ ಭಾರತದ ರಾಜಕಾರಣದಲ್ಲಿ ಕಾನ್ಶಿರಾಂ ಯುಗ ದೊಡ್ಡ ಮಟ್ಟದಲ್ಲೇ ವಿಕಾಸಗೊಂಡಿತ್ತು.

ಈ ನಡುವೆ, ಬಿಎಸ್‌ಪಿ ಹಲವು ಪಕ್ಷಗಳ ಜೊತೆ ಸೇರಿ ಹಾಗೂ ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ದು, ತನ್ನ ಕಾರ್ಯಯೋಜನೆ ಸಾಧಿಸಿದ್ದು, ದಲಿತರ ಹಿತ ಕಾಯ್ದದ್ದು, ಅದರ ರಾಜಿ ರಾಜಕಾರಣ, ಏಳುಬೀಳುಗಳು ಇವೆಲ್ಲ ಎಲ್ಲರಿಗೂ ಗೊತ್ತಿದೆ. ಆದರೆ ಭಾರತದ ರಾಜಕಾರಣದಲ್ಲಿ ಅಂಬೇಡ್ಕರ್ ಹಾದಿಯನ್ನು ಹೊಸ ರೀತಿಯಲ್ಲಿ ವಿಸ್ತರಿಸಬಹುದಾಗಿದ್ದ ಬಿಎಸ್‌ಪಿಯಂಥ ಸೈದ್ಧಾಂತಿಕ ರಾಜಕೀಯ ಪಕ್ಷದ ಹಿನ್ನಡೆ ಬಹುಜನ ರಾಜಕಾರಣದ ಬಗ್ಗೆ ಕಾಳಜಿಯಿರುವ ಎಲ್ಲರಲ್ಲೂ ಆಳವಾದ ವಿಷಾದ ಹುಟ್ಟಿಸಬೇಕು. ಅದರಲ್ಲೂ ಬಿಎಸ್‌ಪಿಯ ವೋಟುಗಳ ಪ್ರಮಾಣ ಪ್ರತಿ ವರ್ಷ ಕುಸಿಯುತ್ತಿರುವುದು ಭಾರತೀಯ ರಾಜಕೀಯದ ಒಂದು ನಿರ್ಣಾಯಕ ಪ್ರಯೋಗಕ್ಕೆ ಆದ ಹಿನ್ನಡೆಯೆಂಬುದು ಎಲ್ಲರಿಗೂ ಅರಿವಾಗಬೇಕು. ದಾದಾಸಾಹೇಬ್ ಕಾನ್ಶಿರಾಂ ನೆನಪು ಬಿಎಸ್‌ಪಿಯನ್ನು ನಿಜವಾದ ಆತ್ಮಪರೀಕ್ಷೆಯತ್ತ ಕರೆದೊಯ್ಯಬಲ್ಲದೆ? ಭ್ರಮೆಗಳಿಲ್ಲದ ಇಂಥ ಮಂಥನ ಮಾತ್ರ ಅಂಬೇಡ್ಕರ್ ನಂತರದ ಬಹುಜನ ರಾಜಕಾರಣವನ್ನೂ ಮರುಜೀವ ಗೊಳಿಸಬಲ್ಲದು.

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X