ದುಬೈ | ʼವಿದ್ಯಾರ್ಥಿ ಸಾಕರ್ ಲೀಗ್- 2025ʼ : ಲಾಂಛನ ಅನಾವರಣ

ಯುಎಇ : ದುಬೈ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಬಹು ನಿರೀಕ್ಷಿತ ಅಂಡರ್-17 ʼವಿದ್ಯಾರ್ಥಿ ಸಾಕರ್ ಲೀಗ್ -2025ʼ(Student Soccer League 2025) ಏಪ್ರಿಲ್ 20ರಂದು ನಡೆಯಲಿದೆ. ಲೀಗ್‌ಗೆ ಪೂರ್ವಭಾವಿಯಾಗಿ ಲಾಂಛನ ಬಿಡುಗಡೆ ದುಬೈನ ಪುಲ್ಮನ್ ಹೋಟೆಲ್ ಮತ್ತು ರೆಸಾರ್ಟ್‌ನಲ್ಲಿ ನಡೆಯಿತು.
ಕೇರಳ ಬ್ಲಾಸ್ಟರ್ಸ್ ತಂಡದ ಮಾಜಿ ಕೋಚ್ ಇವಾನ್ ವುಕೊಮಾನೋವಿಕ್ ಅವರು ಲೀಗ್‌ನ ಅಧಿಕೃತ ಲಾಂಛನವನ್ನು ಅನಾವರಣಗೊಳಿಸಿದರು. ಖಲೀಫಾ ಅಬ್ದುಲ್ಲಾ ಎಸ್ಸಾ ಒಬೈದ್ ಅಲ್ಹೆಬ್ಸಿ ಪಂದ್ಯದ ವಿಶೇಷ ಪ್ರಚಾರದ ವೀಡಿಯೊ ಬಿಡುಗಡೆ ಮಾಡಿದರು. ಆಲ್ಫಿಯಾ ಜೇಮ್ಸ್ ಅಧಿಕೃತವಾಗಿ ಲೀಗ್ ಫ್ಲೈಯರ್ ಬಿಡುಗಡೆ ಗೊಳಿಸಿದರು. ಪಂದ್ಯದ ವೇಳಾಪಟ್ಟಿ ಮತ್ತು ಭಾಗವಹಿಸುವ ತಂಡಗಳ ಬಗ್ಗೆ ವಿವರಿಸಿದರು.
ಖ್ಯಾತ ನಟಿ ಅತುಲ್ಯ ದೇವ್ ಅವರು ಪಂದ್ಯದ ಚೆಂಡನ್ನು ಅನಾವರಣಗೊಳಿಸಿದರು. ಒಮರ್ ಅಲ್ ಮರ್ಝೂಕಿ ಸೇರಿದಂತೆ ಹಲವಾರು ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಹೆಸರಾಂತ ರೇಡಿಯೋ ಜಾಕಿ ಅರ್ಫಾಝ್ ಇಕ್ಬಾಲ್ ಈ ವೇಳೆ ಸ್ವಾಗತಿಸಿ, ನಿರೂಪಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಇಸ್ಮಾಯಿಲ್ ಮೂಳೂರು: +971 50 786 8853 | ಅಬಿದ್ ಕೆ: +971 55 144 2020 | ಮುಹಮ್ಮದ್ ಶಫಿ: +971 55 450 5431