ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ನಿಂದ ಸೀರತುನ್ನಬಿ ಕಾರ್ಯಕ್ರಮ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯುಎಫ್), ಅಬುಧಾಬಿ ಇದರ ವತಿಯಿಂದ ಸೀರತುನ್ನಬಿ ಕಾರ್ಯಕ್ರಮ ಇತ್ತೀಚೆಗೆ ನಗರದ ಹೋಟೆಲ್ ಸಭಾಂಗಣವೊಂದರಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾತನಾಡಿ, 2025ರ ಜನವರಿಯಲ್ಲಿ ಬಿಡಬ್ಲ್ಯುಎಫ್ ನ 20ನೇ ವಾರ್ಷಿಕೋತ್ಸವ ಆಚರಣೆ ಮತ್ತು ಸ್ಮರಣ ಸಂಚಿಕೆ ಹೊರ ತರುವ ಬಗ್ಗೆ ವಿವರಣೆ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಧಾರ್ಮಿಕ ವಿದ್ವಾಂಸ ಅನೀಸ್ ಕೌಸರಿ, ಪ್ರವಾದಿ ಮುಹಮ್ಮದ್ (ಸ.) ಅವರ ಜೀವನ ಸಂದೇಶದ ಬಗ್ಗೆ ಬೆಳಕು ಚೆಲ್ಲಿದರು.
ಅತಿಥಿಗಳಾಗಿ ಮೊಯ್ದಿನ್ ಕುಟ್ಟಿ ಕಕ್ಕಿಂಜೆ, ಅನ್ಸಾರ್ ಬೆಳ್ಳಾರೆ, ಸಲೀಂ ಬೈಜಿ, ಶಹೀರ್ ಹುದವಿ, ಆಸಿಫ್ ಉಳ್ಳಾಲ್, ಹನೀಫ್ ಅರಿಮೂಲೆ ಭಾಗವಹಿಸಿದ್ದರು.
ಜಲೀಲ್ ಮುಕ್ರಿ ಕಾವ್ಯ ವಾಚನ ಮಾಡಿದರು. ತ್ವಾಹಾ ಮತ್ತು ಯಾಸೀರ್ ಟೀಮ್ ನಾಥ್ ಶರೀಫ್ ಪ್ರಸ್ತುತಪಡಿಸಿದರು
ನೂಹ್ ರಶೀದ್ ಕಿರಾಅತ್ ಪಠಿಸಿದರು. ಮುಜೀಬ್ ಉಚ್ಚಿಲ್ ಕನ್ನಡಕ್ಕೆ ಅನುವಾದಿಸಿದರು. ಬಿಡಬ್ಲ್ಯುಎಫ್ ಉಪಾಧ್ಯಕ್ಷ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು. ಜಲೀಲ್ ಗುರುಪುರ ವಂದಿಸಿದರು.
ಬಿಡಬ್ಲ್ಯುಎಫ್ ಪದಾಧಿಕಾರಿಗಳಾದ ಹಂಝ ಕಣ್ಣಗಾರ್ ಮುಹಮ್ಮದ್ ಕಲ್ಲಾಪು, ಇಮ್ರಾನ್ ಕುದ್ರೋಳಿ, ನವಾಝ್ ಉಚ್ಚಿಲ್, ಹಮೀದ್ ಗುರುಪುರ್, ವಿ.ಕೆ.ರಶೀದ್, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್ ಕುತ್ತಾರ್, ಮಜೀದ್ ಆತೂರ್, ಇರ್ಫಾನ್ ಕುದ್ರೋಳಿ, ಸಿರಾಜುದ್ದೀನ್, ಇಮ್ರಾನ್ ಕೃಷ್ಣಾಪುರ, ಬಶೀರ್ ಉಚ್ಚಿಲ್, ನಝೀರ್ ಉಬರ್ ಮತ್ತು ಯಹ್ಯಾ ಕಾರ್ಯಕ್ರಮ ಸಂಘಟಿಸಿ ಯಶಸ್ವಿಯಾಗಿ ನಿರ್ವಹಿಸಿದರು.