ದುಬೈ: ಜ.12ರಂದು ಬದ್ರಿಯಾ ಫ್ರೆಂಡ್ಸ್ ವತಿಯಿಂದ ರಕ್ತದಾನ ಶಿಬಿರ
ದುಬೈ: ಬದ್ರಿಯಾ ಫ್ರೆಂಡ್ಸ್, ದುಬೈ ಇದರ ಆಶ್ರಯದಲ್ಲಿ 'ನಿಮ್ಮ ಚಿಕ್ಕ ಪ್ರಯತ್ನ, ಇನ್ನೊಬ್ಬರ ಬದುಕಿನ ಭರವಸೆ' ಎಂಬ ಧ್ಯೇಯದೊಂದಿಗೆ ರಕ್ತದಾನ ಶಿಬಿರವು ಜ.12ರಂದು ದುಬೈಯಲ್ಲಿ ನಡೆಯಲಿದೆ.
ದುಬೈ - ಅಲ್ ಜದ್ದಾಫ್ ನ ದುಬೈ ಹೆಲ್ತ್ ಅಥಾರಿಟಿ ಹೆಡ್ ಕ್ವಾರ್ಟರ್ಸ್ ನಲ್ಲಿ ಮಧ್ಯಾಹ್ನ 1ರಿಂದ 4ರ ತನಕ ನಡೆಯಲಿರುವ ಈ ರಕ್ತದಾನ ಶಿಬಿರದಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಮಾಹಿತಿಗಾಗಿ ದೂರವಾಣಿ ಸಂಖ್ಯೆ (058 1977600, 052 9007431, 058 8801592, 050 8857076)ಯನ್ನು ಸಂಪರ್ಕಿಸುವಂತೆ ಬದ್ರಿಯಾ ಫ್ರೆಂಡ್ಸ್ ನ ಎಸ್.ಕೆ.ಸಮೀರ್ ಸೂರಿಕುಮೇರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story