ಕೆ.ಸಿ.ಎಫ್. ಬಹರೈನ್ ಸೌತ್ ಝೋನ್ ವತಿಯಿಂದ ರಕ್ತದಾನ ಶಿಬಿರ

ಬಹರೈನ್: ಭಾರತದ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೆ.ಸಿ.ಎಫ್. ಬಹರೈನ್ ಸೌತ್ ಝೋನ್ ವತಿಯಿಂದ ಜ.24ರಂದು ರಕ್ತದಾನ ಶಿಬಿರವನ್ನು ಇಲ್ಲಿನ ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೆ.ಸಿ.ಎಫ್. ಸೌತ್ ಝೋನ್ ಅಧ್ಯಕ್ಷ ಸೈಯದ್ ಪೆರ್ಲ ಹಾಗೂ ಕೋಶಾಧಿಕಾರಿ ಶಾಫಿ ಕಂಬಳಬೆಟ್ಟು ನೇತೃತ್ವದಲ್ಲಿ ನಡೆದ ಶಿಬಿರದ ಕೋ ಆರ್ಡಿನೇಟರ್ ಗಳಾಗಿ ಸೌತ್ ಝೋನ್ ಸಂಘಟನಾ ವಿಭಾಗದ ಅಧ್ಯಕ್ಷ ಹಾರಿಸ್ ಮೂಳೂರು, ಇಹ್ಸಾನ್ ಕಾರ್ಯದರ್ಶಿ ಪೈಝಲ್ ಮಾದಾಪುರ ಕಾರ್ಯನಿರ್ವಹಿಸಿದ್ದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆ.ಸಿ.ಎಫ್. ಅಂತರ್ ರಾಷ್ಟ್ರೀಯ ಸಮಿತಿಯ ಫೈನಾನ್ಸ್ ಕಂಟ್ರೋಲರ್ ಅಲಿ ಮುಸ್ಲಿಯಾರ್, ಕೆ.ಸಿ.ಎಫ್. ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಮುಆಝ್ ಉಜಿರೆ, ಸಂಘಟನಾ ವಿಭಾಗದ ಅಧ್ಯಕ್ಷ ಮನ್ಸೂರ್ ಬೆಲ್ಮ, ಕಾರ್ಯದರ್ಶಿ ಸೂಫಿ ಪಯಂಬಚಾಲ್, ಸಾಂತ್ವನ ವಿಭಾಗದ ಅಧ್ಯಕ್ಷ ರಝಾಕ್ ಆನೇಕಲ್, ಪ್ರಕಾಶನ ವಿಭಾಗದ ಅಧ್ಯಕ್ಷ ಕಲಂದರ್ ಮುಸ್ಲಿಯಾರ್ ಕಕ್ಕೆಪದವು, ಇಹ್ಸಾನ್ ಕಾರ್ಯದರ್ಶಿ ಮಜೀದ್ ಝುಹುರಿ ಸುಳ್ಯ, ಮಾಜಿ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಭಾಗವಹಿಸಿದ್ದರು.
ಶಿಬಿರದಲ್ಲಿ ಸುಮಾರು 131 ಕಾರ್ಯಕರ್ತರು ರಕ್ತದಾನ ಮಾಡಿದರು.