ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಂ ಸೌದಿ ಅರೇಬಿಯಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ದಮ್ಮಾಮ್: ಇಲ್ಲಿನ ಖತೀಫ್ ನ ಇಸ್ತಿರಾ ವೊಂದರಲ್ಲಿ ಇತ್ತೀಚೆಗೆ (ಡಿ.1) ಕಲ್ಲಡ್ಕ ಅಬ್ರಾಡ್ ಫಾರಂ (ಏಂಈ) ನ ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ಸೌದಿ ಅರೇಬಿಯಾ ಘಟಕದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಫಿರೋಜ್ ಕಲ್ಲಡ್ಕರವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್ ಕಲ್ಲಡ್ಕ ಆಯ್ಕೆಯಾಯಾಗಿದ್ದಾರೆ.
ಸಭೆಯಲ್ಲಿ ದಮ್ಮಾಮ್ ಸುತ್ತಮುತ್ತಲ ಸುಮಾರು ನಲವತ್ತು ಮಂದಿ ಕಲ್ಲಡ್ಕ ಅಬ್ರಾಡ್ ಫೋರಂ ಸದಸ್ಯರು ಪಾಲ್ಗೊಂಡಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಫಿರೋಜ್ ರವರು “ಸೌದಿ ಅರೇಬಿಯಾವು 2030 ವಿಷನ್ ಅಂಗವಾಗಿ ನೂರಾರು ಯೋಜನೆಗಳನ್ನು ಎತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಉದ್ಯೋಗ ಮಾರುಕಟ್ಟೆಯು ಇನ್ನಷ್ಟು ವೃದ್ಧಿ ಕಾಣಲಿದೆ. ಈ ಹಂತದಲ್ಲಿ ಹೆಚ್ಚು ಹೆಚ್ಚು ಮಂದಿ ಊರಿನಿಂದ ಉದ್ಯೋಗ ಅರಸಿ ಇಲ್ಲಿಗೆ ಬರಲಿದ್ದಾರೆ. ಕಲ್ಲಡ್ಕ ಅಬ್ರಾಡ್ ಫೋರಂ ಈ ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ” ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷರಾಗಿ ಜಾವೇದ್ ಕಲ್ಲಡ್ಕ, ಮುಜೀಬ್ ಕಲ್ಲಡ್ಕ ಮತ್ತು ಫಾರೂಕ್ ಪೋರ್ಟ್ ಫೋಲಿಯೋರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಸಿದ್ದೀಕ್ ಜುಬೈಲ್ ಮತ್ತು ತಮೀಮ್ ಸಖ್ವಾಫ್ ರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಫಹದ್ ಅನ್ವರ್ ಆಯ್ಕೆಯಾದರು.
ಸಲಹೆಗಾರರಾಗಿ ಇಸ್ಮಾಯೀಲ್ ಕಲ್ಲಡ್ಕ, ಫಯಾಜ್ ಕಲ್ಲಡ್ಕ ಮತ್ತು ಸಿದ್ದೀಕ್ ಗೋಳ್ತಮಜಲು ಅವರನ್ನು ಆಯ್ಕೆ ಮಾಡಲಾಯಿತು.
ಕಲ್ಲಡ್ಕ ಅಬ್ರಾಡ್ ಫಾರಂ ಅನ್ನು 2017 ರಲ್ಲಿ ಜಿದ್ದಾದಲ್ಲಿ ಸ್ಥಾಪಿಸಲಾಗಿತ್ತು. ಸೌದಿ ಅರೇಬಿಯಾದ್ಯಂತ ಇರುವ ಕಲ್ಲಡ್ಕ ನಿವಾಸಿಗಳ ನೆಟ್ವರ್ಕ್ ಸ್ಥಾಪಿಸಿ ಆ ಮೂಲಕ ಪರಸ್ಪರ ಸಹಕಾರಗಳನ್ನು ವೃದ್ಧಿಸುವುದು ಸಂಘಟನೆಯ ಉದ್ದೇಶವಾಗಿದೆ.