ಡಿಕೆಎಸ್‌ಸಿ ಜುಬೈಲ್ ಘಟಕದ ವತಿಯಿಂದ ಇಫ್ತಾರ್ ಮೀಟ್

ಕಾಪು: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಜುಬೈಲ್ ಘಟಕ ಮತ್ತು ಯೂತ್ ವಿಂಗ್ ಜಂಟಿ ಅಶ್ರಯದಲ್ಲಿ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮವು ಗುರುವಾರ ಜುಬೈಲ್ ಅಲ್ ಫಲಾಹ್ ಮೈದಾನದಲ್ಲಿ ನಡೆಯಿತು.
ದಾಈ ಉಸ್ತಾದ್ ಝುಬೈರ್ ಸಖಾಫಿಯವರ ದುವಾ ಹಾಗೂ ನಸೀಹತ್ ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಯುವ ವಿದ್ವಾಂಸ ಉಸ್ತಾದ್ ಅರ್ಮಾನ್ ಮುಹಮ್ಮದ್ ಉಧ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಕ್ಸ್ಪಪರ್ಟೈಸ್ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಉದ್ಯಮಿ ಅಶ್ಫಾಕ್ ಕರ್ನಿರೆ, ಅಲ್ ಫಲಾಹ್ ಸಂಸ್ಥೆಯ ಮುಖ್ಯಸ್ಥ ನಝೀರ್ ಪಡುಬಿದ್ರೆ, ಆಂಪ್ಲಿಟ್ಯೂಡ್ ಸಂಸ್ಥೆಯ ಮಾಲಕ ಜುನೈದ್, ಮಂಗಳೂರು ಖಾಝಿ ಶೈಖುನಾ ತ್ವಾಖ ಉಸ್ತಾದ್ರ ಸುಪುತ್ರ ಉಸ್ತಾದ್ ಹುಸೈನ್ ರಹ್ಮಾನಿ, ಕೆಸಿಎಫ್ ಅಂತರಾಷ್ಟ್ರೀಯ ನಾಯಕ ಕಮರುದ್ದೀನ್ ಗೂಡಿನಬಳಿ ಮಾಜಿ ಶಾಸಕ ಮುಹಿಯುದ್ದೀನ್ ಬಾವ, ಮುಂಬಯಿಯ ಹಿರಿಯ ಉದ್ಯಮಿ ಯೂನುಸ್ ಮುಖ್ಯ ಅತಿಥಿಗಳಾಗಿದ್ದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, 30 ವಿಶನ್ ಚೇರ್ಮಾನ್ ಹಾತಿಂ ಕೂಳೂರು, ವಲಯಾಧ್ಯಕ್ಷರಾದ ಅಬ್ದುಲ್ ಹಮೀದ್, ಕಾಪು, ಪ್ರ. ಕಾರ್ಯದರ್ಶಿ ಮುಹಮ್ಮದ್, ರೋಯಲ್ ಯೂತ್ ವಿಂಗ್ ಅಧ್ಯಕ್ಷ ಮುಹಮ್ಮದ್ ಸಾಮಿತ್, ಇಕ್ಬಾಲ್ ಮಲ್ಲೂರು ಉಪಸ್ಥಿತರಿದ್ದರು.
ಸುಮಾರು 2000 ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು. ಜುಬೈಲ್ ಪರಿಸರದ ಎಲ್ಲಾ ಸಂಘ ಸಂಸ್ಥೆಗಳ ನಾಯಕರು ಕಾರ್ಯಕರ್ತರೂ ಭಾಗವಹಿಸಿ ಸ್ವಯಂ ಸೇವಕರಾಗಿಯೂ ಕೆಲಸ ನಿರ್ವಹಿಸಿದರು.
ಕಾರ್ಯಕ್ರಮ ಸಮಿತಿಯ ಚೇರ್ಮಾನ್ ಶಮೀರ್ ಪಲಿಮಾರ್, ವೈಸ್ ಚೇರ್ಮಾನ್ ಮುಹಮ್ಮದ್ ಸಾಮಿತ್, ಅಶ್ರಫ್ ನಾಳ, ಮುಸ್ತಫ ಮೈನಾ, ಕೆಎಚ್ ರಫೀಕ್ ಸೂರಿಂಜೆ, ಸುಲೈಮಾನ್ ಸೂರಿಂಜೆ, ಮುಹಮ್ಮದ್ ಸಾಹಿಕ್, ಜಮಾಲ್ ಕನ್ನಂಗಾರ್, ಅಹ್ಮದ್ ಕನ್ನಂಗಾರ್, ಅನ್ವರ್ ಪಡುಬಿದ್ರಿ, ಕರೀಂ ಪಾಣೆಮಂಗಳೂರು, ಸಫೀರ್ ಗೂಡಿನಬಳಿ, ಅಬ್ದುಲ್ ಹಮೀದ್ ಅರಮೆಕ್ಸ್, ಅಬೂಬಕ್ಕರ್ ಬರ್ವ ಮತ್ತು ಯೂತ್ ವಿಂಗ್ ನ ಯುವಕರು ಮತ್ತು ಘಟಕದ ಸದಸ್ಯರು ಬಹಳ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ಘಟಕಾಧ್ಯಕ್ಷ ಮುಹಮ್ಮದ್ ಅಲಿ ಮುಝೈನ್ ಸ್ವಾಗತಿಸಿದರು. ಇಮಾಮ್ ನವವಿ ಮದ್ರಸ ಅಧ್ಯಾಪಕರಾದ ಹಾಫಿಝ್ ರಷೀದ್ ಮುಈನಿ ಅವರು ಖಿರಾಅತ್ ಪಠಿಸಿದರು.
ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ನಿರೂಪಿಸಿದರು. ಅಬ್ದುಲ್ ಹಮೀದ್ ಅರಮೆಕ್ಸ ವಂದಿಸಿದರು.