ದುಬೈಯಲ್ಲಿ ಮೇಕ್ ಫೌಂಡೇಶನ್ ಉದ್ಘಾಟನೆ, ವಿಧಾನಸಭಾಧ್ಯಕ್ಷ ಯುಟಿ ಖಾದರ್ ರಿಗೆ ಸನ್ಮಾನ
ದುಬೈ: ಹಿಂದುಳಿದ ಸಮಾಜವೊಂದರ ಮುನ್ನಡೆಗೆ ಶಿಕ್ಷಣವೇ ದಾರಿ. ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಹೆಚ್ಚಿಸುವ ಪ್ರಯತ್ನ ಅತ್ಯಂತ ಸಕಾಲಿಕ. ಈ ನಿಟ್ಟಿನಲ್ಲಿ ದುಡಿಯುತ್ತಿರುವ ಮುಈನುಸುನ್ನಾ ಹಾವೇರಿ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಹೇಳಿದರು.
ಮುಈನುಸುನ್ನಾ ಹಾವೇರಿ ಸಂಸ್ಥೆಯ ಅಧೀನದಲ್ಲಿ ಅಸ್ತಿತ್ವಕ್ಕೆ ಬರಲಿರುವ ಶೈಕ್ಷಣಿಕ ಸಂಸ್ಥೆಗಳ ಸಮುಚ್ಚಯ 'ಮೇಕ್ ಫೌಂಡೇಶನ್'ಗೆ ಚಾಲನೆ ನೀಡಿ ಅವರು ಮಾತನಾಡಿದರು.
ದುಬೈಯ ಫ್ಲೋರಾ ಕ್ರೀಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಾ. ಫಾಝಿಲ್ ರಝ್ವಿ ಕಾವಲ್ಕಟ್ಟೆ ಹಝ್ರತ್ ಆಶೀರ್ವಚನ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಸಿ ಎ ಅಬ್ದುಲ್ಲ ಮಾದುಮೂಲೆ ಅಧ್ಯಕ್ಷತೆಯಲ್ಲಿ ಉದ್ಯಮಿ ಫ್ಲೋರಾ ಹಸನ್ ಹಾಜಿ ಉದ್ಘಾಟಿಸಿದರು.
ಇದೇ ವೇಳೆ ಸ್ಪೀಕರ್ ಯುಟಿ ಖಾದರ್ ಅವರನ್ನು ಸನ್ಮಾನಿಸಲಾಯಿತು.
ಮುಈನುಸುನ್ನಾ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫಾ ನಈಮಿ ದಿಕ್ಸೂಚಿ ಭಾಷಣ ಮಾಡಿದರು. ಮುಈನುಸುನ್ನಾ ಯುಎಇ ಸಲಹೆಗಾರ ಸಯ್ಯಿದ್ ಫಝಲ್ ಅಲ್ ಬುಖಾರಿ ಶಾರ್ಜಾ, ಮುಈನುಸುನ್ನಾ ಹಾವೇರಿ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್, ಕೋಶಾಧಿಕಾರಿ ಡಾ. ಶೇಖ್ ಬಾವ ಮಂಗಳೂರು ಮಾತನಾಡಿದರು.
ಕೆಎಂಸಿಸಿ ರಾಷ್ಟ್ರೀಯ ನಾಯಕ ರಹೀಂ ಪುತ್ತೂರ್, ಕೆಸಿಎಫ್ ರಾಷ್ಟ್ರೀಯ ಕಾರ್ಯದರ್ಶಿ ಮೂಸಾ ಬಸರಾ, ಉದ್ಯಮಿಗಳಾದ ಆಸ್ಟರ್ ಶರೀಫ್ ಬಂಟ್ವಾಳ, ಡಾ. ಮುಹಮ್ಮದ್ ತೋನ್ಸೆ, ಇಂಜಿನಿಯರ್ ಡಾ. ಸಈದ್ ತುನೈಜಿ ಮತ್ತಿತರರು ಉಪಸ್ಥಿತರಿದ್ದರು.
ಮೇಕ್ ಫೌಂಡೇಶನ್ ಪೋಷಕರಾದ ಅಶ್ರಫ್ ಶಾ ಮಾಂತೂರು ಸ್ವಾಗತಿಸಿ, ಇಮ್ರಾನ್ ಕೆಸಿರೋಡ್ ಧನ್ಯವಾದ ಸಲ್ಲಿಸಿದರು.