ಅಜ್ಮಾನ್: ಭಾರತದ ರಾಯಭಾರಿ ಸಂಜಯ್ ಸುಧೀರ್ ತುಂಬೆ ಮೆಡಿಸಿಟಿಗೆ ಭೇಟಿ
ಅಜ್ಮಾನ್: ಭಾರತದ ರಾಯಭಾರಿ ಎಚ್.ಇ ಸಂಜಯ್ ಸುಧೀರ್ ಅವರು ಯುಎಇ ಅಜ್ಮಾನ್ ನಲ್ಲಿನ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದ್ದಾರೆ.
ಭಾರತದ ರಾಯಭಾರಿ ಎಚ್.ಇ. ಸಂಜಯ್ ಸುಧೀರ್ ಅವರನ್ನು ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ತುಂಬೆ ಮೊಯ್ದಿನ್ ಮತ್ತು ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷರಾದ ಅಕ್ಬರ್ ಮೊಯ್ದಿನ್ ತುಂಬೆ ಅವರು ತುಂಬೆ ಮೆಡಿಸಿಟಿಗೆ ಬರಮಾಡಿಕೊಂಡಿದ್ದಾರೆ. ರಾಯಭಾರಿ ಸಂಜಯ್ ಸುಧೀರ್ ಅವರು ತುಂಬೆ ಫಿಸಿಕಲ್ ಥೆರಪಿ ಮತ್ತು ಪುನರ್ವಸತಿ ಆಸ್ಪತ್ರೆ, ತುಂಬೆ ದಂತ ವೈದ್ಯಕೀಯ ಆಸ್ಪತ್ರೆಗೂ ಭೇಟಿ ನೀಡಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಎಚ್.ಇ ಸುಂಜಯ್ ಸುಧೀರ್ ಅವರು ಡಾ.ತುಂಬೆ ಮೊಯ್ದಿನ್ ಮತ್ತು ಅಕ್ಬರ್ ಮೊಯ್ದಿನ್ ತುಂಬೆ ಅವರೊಂದಿಗೆ ಭಾರತ ಮತ್ತು ಯುಎಇ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಮಹತ್ವದ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ತುಂಬೆ ಮೊಯ್ದಿನ್, ಸಂಜಯ್ ಸುಧೀರ್ ಅವರು ತುಂಬೆ ಮೆಡಿಸಿಟಿಗೆ ಆಗಮಿಸಿರುವುದರಿಂದ ಸಂತೋಷವಾಗಿದೆ. ಅವರ ಭೇಟಿಯು ಆರೋಗ್ಯ ಮತ್ತು ಶಿಕ್ಷಣದಲ್ಲಿ ಪ್ರಗತಿಗೆ ಯುಎಇ ಮತ್ತು ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸುವ ದೃಷ್ಟಿಯಿಂದ ಈ ಸಂಬಂಧವನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಂಜಯ್ ಸುಧೀರ್ ಮಾತನಾಡುತ್ತಾ, ತುಂಬೆ ಮೆಡಿಸಿಟಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ತುಂಬೆ ಗ್ರೂಪ್ ನ ಗಮನಾರ್ಹ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.