IOC ಅನಿವಾಸಿ ಹಜ್ ಸ್ವಯಂ ಸೇವಕರ ಕೋಶ: ನೂತನ ಪದಾಧಿಕಾರಿಗಳ ಆಯ್ಕೆ
ಜಿದ್ದಾ: ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (IOC) ಸೌದಿ ಅರೇಬಿಯಾ ಇದರ ರಾಷ್ಟ್ರೀಯ ಅಧ್ಯಕ್ಷರಾದ ಜಾವಿದ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಜಿದ್ದಾದ ಮೌಂಟೈನ್ ಆಡಿಟೋರಿಯಂನಲ್ಲಿ ಗುರುವಾರ ಕಾರ್ಯಕ್ರಮ ನಡೆಯಿತು.
ಈ ಬಾರಿ ಪವಿತ್ರ ಹಜ್ಜ್ ಗೆ ಆಗಮಿಸಿದ ಹಜ್ಜಾಜ್ ಗಳ ಸೇವೆಗೈದ ಸ್ವಯಂ ಸೇವಕರಿಗೆ ವಿಶೇಷ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ನಂತರ ಮುಂದಿನ ಕಾರ್ಯ ವೈಖರಿಯ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಸಭೆಯು ಅನುಮೋದಿಸಿತು.
2024-25ನೇ ಸಾಲಿನ ಹಜ್ ಸ್ವಯಂ ಸೇವಕರ ಕೋಶಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಚೇರ್ಮನ್ : ಇಬ್ರಾಹಿಂ ಕನ್ನಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ : ಇಕ್ಬಾಲ್ ಗಬ್ಗಲ್, ಹಣಕಾಸು ಕಾರ್ಯದರ್ಶಿಯಾಗಿ: ಇಮ್ತಿಯಾಝ್ ಮಂಗಳೂರು, ಮುಖ್ಯ ಕೋರ್ಡಿನೇಟರ್ : ಜೀಶನ್ ಬಾಳೆಹೊನ್ನೂರು, ಸಂವಹನ ಕಾರ್ಯದರ್ಶಿ : ಜಸೀಂ ಕಲ್ಲಡ್ಕ, ಮಾಧ್ಯಮ ಉಸ್ತುವಾರಿ : ಇಮ್ರಾನ್ ಅಡ್ಡೂರು, ಸಹ ಹಣಕಾಸು ಕಾರ್ಯದರ್ಶಿ : ಇಲ್ಯಾಸ್ ಕನ್ನಂಗಾರ್, ಕೇಂದ್ರ ಕೋರ್ಡಿನೇಟರ್ : ಜಮಾಲ್ ಸ್ವಾಲಿಹ್ ಕನ್ನಂಗಾರ್, ಈಸ್ಟರ್ನ್ ಪ್ರೊವಿಝನ್ ಕೋರ್ಡಿನೇಟರ್ : ಅಬ್ದುಲ್ ಅಝೀಝ್ ಆತೂರು, ಅಬ್ದುಲ್ ಅಝೀಝ್ ಮೂಳೂರು, ಅಝರ್ ಮುಟ್ಟಿಕ್ಕಲ್, ವೆಸ್ಟರ್ನ್ ಪ್ರೊವಿಝನ್ ಕೋರ್ಡಿನೇಟರ್ : ನಾಸಿರ್, ಹಾರಿಸ್, ಸಾಹುಲ್, ಬಾಷಾ ವಾಮಂಜೂರು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಬೇಕೆಂದು ಕರ್ನಾಟಕ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಮಾಧ್ಯಮ ಉಸ್ತುವಾರಿ ಇಮ್ರಾನ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿ, ಹಾರಿಸ್ ವಂದಿಸಿದರು.