ಜುಬೈಲ್ : ಎನ್.ಆರ್.ಐ ಸಹೋದರರು ಮುಕ್ಕ ಸಮಿತಿಯ ವಾರ್ಷಿಕ ಮಹಾಸಭೆ, ನೂತನ ಸಮಿತಿ ರಚನೆ
ಜುಬೈಲ್: ಎನ್.ಆರ್.ಐ ಸಹೋದರರು ಮುಕ್ಕ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಸೆ. 26 ರಂದು ಸೌದಿ ಅರೇಬಿಯಾದ ಜುಬೈಲ್ "ಮಸ್ಕ್ 7" ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವು ಮುಹಮ್ಮದ್ ಅಶ್ರಫ್ ಗದ್ದೆಮನೆ ಯವರ ಕಿರಾಅತ್ ಮೂಲಕ ಪ್ರಾರಂಭವಾಯಿತು. ಸೌದಿ ಅರೇಬಿಯಾದ ನಾನಾ ಭಾಗಗಳಿಂದ ಹಾಗೂ ದುಬೈ ಮತ್ತು ಕತಾರ್ ನಿಂದ ಬಂದ ಸುಮಾರು ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ NRI ಮುಕ್ಕ ಸಮಿತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾಮಗಾರಿ ಹಾಗೂ ಯಶಸ್ವಿ ಕಾರ್ಯ ಸಾಧನೆ ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚೆ ನಡೆಯಿತು.
ಮುಖ್ಯವಾಗಿ ಎನ್.ಆರ್.ಐ ಸಮಿತಿ ಇದರ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ "ಫ್ಯಾಮಿಲಿ ರಿಲೀಫ್ ಫಂಡ್"(FRF)ಯೋಜನೆಯ ಸದುಪಯೋಗ ಹಾಗೂ ಕಾರ್ಯಗತಗೊಳಿಸುವ ಬಗ್ಗೆ ಸಮಿತಿಯ ಅಧ್ಯಕ್ಷ K M ಹಸನ್ , ಮುಝಫರ್ ಹಾಗೂ ಶಮೀಮ್ ಮೊಯಿದಿನ್ ರವರು ಸಭೆಯಲ್ಲಿ ವಿವರಣೆ ನೀಡಿದರು.
ಮುಹಮ್ಮದ್ ಝೈನುದ್ದೀನ್ ರವರು ಎನ್.ಆರ್.ಐ ಮುಕ್ಕ ಇದರ ಸ್ಥಾಪನೆ ಹಾಗೂ ಸಾಧನೆಯ ಸಂಕ್ಷಿಪ್ತ ಹಾಗೂ ಪರಿಪೂರ್ಣ ವಿವರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಶಮೀಮ್ ಮೊಯಿದಿನ್ ಅವರು ಬರೆದ "ಹಜ್ಜ್ ಅನುಭವ- 2024" ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಜೊತೆಗೆ ಊರಿನಿಂದ ಉಮ್ರಾ ನೆರವೇರಿಸಲು ಬಂದ ಹಿರಿಯರಾದ K M ಇದ್ದಿನಬ್ಬ ,ಇಕ್ಬಾಲ್ ಹಸನ್ ಹಾಗೂ ಅಬ್ದುಲ್ ಗಫೂರ್ ಅವರನ್ನು ಸನ್ಮಾನಿಸಲಾಯಿತು. ಶಮೀಮ್ ಮೊಯಿದಿನ್ ಅವರ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಸಾದಿಕ್ ಮೊಯ್ದಿನ್, ಉಪಾಧ್ಯಕ್ಷರುಗಳಾಗಿ ಮುಸ್ತಾಕ್ ಅಹ್ಮದ್ ಹಾಗೂ ಮುಹಮ್ಮದ್ ಶಾಹಿಕ್ , ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಫ್ವಾನ್ ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಝೈನುದ್ದೀನ್ ಹಾಗೂ ರಿಝ್ವಾನ್ ಶಾಫಿ ಕೋಶಾಧಿಕಾರಿಯಾಗಿ ಕೆ.ಎಮ್.ಹಸನ್ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರುಗಳನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು.
ಮುಹಮ್ಮದ್ ಸಫ್ವಾನ್ ರವರು ಸ್ವಾಗತಿಸಿ, ಸಮಿತಿ ಅಧ್ಯಕ್ಷ K M ಹಸನ್ ರವರು ಉದ್ಘಾಟಿಸುವ ಮೂಲಕ ನಡೆದ ಸಭಾ ಕಾರ್ಯಕ್ರಮವನ್ನು ಸಫ್ವಾನ್ ಮತ್ತು ಝೈನುದ್ದೀನ್ ನಿರೂಪಿಸಿದರು. ಮೂರು ಸ್ವಲಾತ್ ನೊಂದಿಗೆ ಸಭೆ ಮುಕ್ತಾಯಗೊಂಡಿತು.