ಹಜ್ಜಾಜ್ ಗಳ ಸೇವೆಯಲ್ಲಿ ನಿರತರಾದ ಕೆಸಿಎಫ್ ಸ್ವಯಂ ಸೇವಕರು
ಮದೀನಾ (ಸೌದಿ ಅರೇಬಿಯಾ) : ಕರ್ನಾಟಕ ಕಲ್ಬರಲ್ ಫೌಂಡೇಶನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ HVC (Hajj Volunteer Core) KCF ಸ್ವಯಂಸೇವಕರು ಈ ಸಲದ ಕರ್ನಾಟಕದ ಮೊದಲ ಹಜ್ಜಾಜ್ ಗಳ ತಂಡವು ಪವಿತ್ರ ಮದೀನಾ ಮುನವ್ವರ ತಲುಪಿದಾಗ ಅವರನ್ನು ಸ್ವಾಗತಿಸುವ ಮೂಲಕ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಹಜ್ಜ್ ಯಾತ್ರಾರ್ಥಿಗಳಿಗೆ ಸೇವೆ ಮಾಡುವುದರಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಹಜ್ಜ್ ಸ್ವಯಂ ಸೇವಕರು ನಿರತರಾಗಿದ್ದಾರೆ.
ಲಕ್ಷಾಂತರ ಜನರ ನಡುವೆ ಕೊಠಡಿಗಳ ದಾರಿ ತಪ್ಪಿದ ಹಾಜಿಗಳನ್ನು ಕೊಠಡಿಗೆ ತಲುಪಿಸುವಲ್ಲಿ ಮಾತ್ರವಲ್ಲ ಅನಾರೋಗ್ಯ ಪೀಡಿತ ಹಾಜಿಗಳನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ನೆರವಾಗಿದ್ದಾರೆ.
ಹಜ್ಜಾಜಿಗಳ ಸೇವೆ ಅಲ್ಲಾಹನ ಸೇವೆ ಎಂಬ ನೆಲೆಯಲ್ಲಿ ನಾವು ಹಾಜಿಗಳ ಸೇವೆ ಮಾಡುತ್ತಿದ್ದೇವೆ. ಈ ಬಾರಿಯೂ ಕೆಸಿಎಫ್ ಹಜ್ಜ್ ಸ್ವಯಂ ಸೇವಕರು ದಿನದ 24ಗಂಟೆ ಹಾಜಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಈ ಸಲದ ಸ್ವಯಂಸೇವಕರ ತಂಡದ ಚೇರ್ಮಾನ್ ಆಗಿ ಮುಹಮ್ಮದ್ ಮಲಬೆಟ್ಟು,ಕನ್ವಿನರ್ ಇಬ್ರಾಹಿಮ್ ಕಿನ್ಯಾ ಕೋಶಾಧಿಕಾರಿಯಾಗಿ ಉಮರ್ ಅಳಕೆಮಜಲು, ಮದೀನಾ ಕ್ಯಾಪ್ಟನ್ ರಝಾಕ್ ಉಳ್ಳಾಲ, ತಾಜುದ್ದೀನ್ ಸುಳ್ಯ ಹಾಗೂ ಮಕ್ಕತುಲ್ ಮುಕರಮ್ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ ರವರು ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ.