M G T ರಿಯಾದ್ ವಲಯದ ನೂತನ ಅಧ್ಯಕ್ಷರಾಗಿ ಇರ್ಷಾದ್ ಚಕ್ಮಕ್ಕಿ ಆಯ್ಕೆ
ರಿಯಾದ್: ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ (ರಿ) ರಿಯಾದ್ ವಲಯದ ವಾರ್ಷಿಕ ಮಹಾಸಭೆಯು ಅಲ್ ಮಥರ್ ಅಸ್ಶಮಾಲಿ ರಿಯಾದ್ ನಲ್ಲಿ ಶುಕ್ರವಾರ ನಡೆಯಿತು.
ನಝೀರ್ ಜಯಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಸ್ತಫ ಝೈನಿ ಕುಂಬಿಪಾಣ ಕಿರಾಅತ್ ಪಠಿಸಿದರು. ಸಮೀರ್ ಹಾಸನ ಸ್ವಾಗತಿಸಿದರು. ಅನ್ಸರ್ ಚಕ್ಮಕ್ಕಿ ಕಾರ್ಯಕ್ರಮ ನಿರೂಪಿಸಿದರು.
ರಿಯಾದ್ ವಲಯದ ಪ್ರಧಾನ ಕಾರ್ಯದರ್ಶಿ ಅನ್ಸರ್ ಚಕ್ಮಕ್ಕಿ ಅವರು 2023ರ ಸಾಲಿನ ವಾರ್ಷಿಕ ವರದಿಯನ್ನು ನೀಡಿ ಲೆಕ್ಕ ಪತ್ರವನ್ನು ಸಮಿತಿಯ ಮುಂದಿಟ್ಟರು, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸಿರಾಜ್ ಚಕ್ಮಕ್ಕಿ ಅವರು ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯ ಬಗ್ಗೆ ಹೊಸ ಸದಸ್ಯರಿಗೆ ಮನದಟ್ಟು ಮಾಡಿ ಸಂಘಟನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷರ ಭಾಷಣವನ್ನು ರಿಯಾದ್ ವಲಯದ ಅಧ್ಯಕ್ಷರಾದ ನಝೀರ್ ಜಯಪುರ ನೆರವೇರಿಸಿ, ರಿಯಾದ್ ವಲಯದ ಸಾಧನೆಗಳನ್ನು ಸಭಿಕರ ಮುುಂದಿಡುತ್ತ ಸರ್ವ ಸದಸ್ಯರಿಗೆ ಅಭಿನಂದಿಸಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.
ಸರ್ವ ಸದಸ್ಯರ ಸಮ್ಮತದೊಂದಿಗೆ ನೂತನ ಅಧ್ಯಕ್ಷರಾಗಿ ಇರ್ಷಾದ್ ಚಕ್ಮಕ್ಕಿ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಪ್ರಧಾನ ಕಾರ್ಯದರ್ಶಿಯಾಗಿ ಅನ್ಸರ್ ಚಕ್ಮಕ್ಕಿ ಅವರನ್ನು ಮುಂದುವರಿಸಲಾಯಿತು.
ಉಳಿದ ಪದಾಧಿಕಾರಿಗಳ ಪಟ್ಟಿ:
ಗೌರವಾಧ್ಯಕ್ಷರು :- ಸಿರಾಜ್ ಚಕ್ಮಕ್ಕಿ
ಉಪಾಧ್ಯಕ್ಷರುಗಳು:- ಅಬ್ದುಲ್ ಅಝೀಝ್ ಕೊಪ್ಪ, ಅಫ್ರೋಝ್ ಹಾಸನ, ಝಬೀರ್ ಬಾಳೆಹೊನ್ನುರು
ಉಪ ಕಾರ್ಯದರ್ಶಿ:- ನವಾಝ್ ಚಿಕ್ಕಮಗಳೂರು ಹಾಗು ಹರ್ಷದ್ ಕೊಡ್ಲಿಪೇಟೆ
ಖಚಾಂಚಿ:- ಅಬೂಬಕರ್ ಸಿದ್ದೀಖ್ ಬೇಲೂರು
ಮಾದ್ಯಮ ವಿಭಾಗದ ಸಂಯೋಜಕರು:- ಇಸಾಕ್ ಬಾಳುಪೇಟೆ, ಅಬ್ದುಲ್ ರಹಿಮಾನ್ ಕೊಪ್ಪ, ಸಮೀರ್ ಹಾಸನ.
ಎಕ್ಸಿಕ್ವೂಟಿವ್ ಸಂಯೋಜಕರು:- ಇಸ್ಮಾಯಿಲ್ ಶರೀಫ್ ಗುಡ್ಡೆಕೊಪ್ಪ
ಕಾರ್ಯಕಾರಿ ಸಮಿತಿಯ ನೂತನ ಸದಸ್ಯರ ವಿವರ
ನಝೀರ್ ಜಯಪುರ, ಜುನೈದ್ ಇಸ್ಮಾಯಿಲ್ ಚಕ್ಮಕ್ಕಿ, ಅಬೂಬಕರ್ ಸಿದ್ದೀಕ್ ಕೊಡ್ಲಿಪೇಟೆ, ಅಸ್ಗರ್ ಅಬೂಬಕರ್ ಚಕ್ಮಕ್ಕಿ, ರಿಯಾಝ್ ಬಾಳೆಹೊನ್ನುರು, ಇರ್ಷಾದ್ ದಾವಣಗೆರೆ, ಇಬ್ರಾಹಿಂ ಹೊಸ ಕೋಟೆ, ಮಹಮ್ಮದ್ ಆಲಿ ಕೊಪ್ಪ.
ನೂತನ ಅಧ್ಯಕ್ಷರಾದ ಇರ್ಷಾದ್ ಚಕ್ಮಕ್ಕಿಯವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹೊಸದಾಗಿ ರೂಪುಗೊಂಡ ಸಮಿತಿಗೆ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ಅನ್ಸರ್ ಚಕ್ಮಕ್ಕಿ ಧನ್ಯವಾದ ಸಲ್ಲಿಸಿದರು.