ಬ್ಯಾರೀಸ್ ವೆಲ್ಫೇರ್ ಫೋರಂ ಸ್ಥಾಪಕ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ರಿಗೆ ‘ಗಲ್ಫ್ ಕರ್ನಾಟಕ ರತ್ನ’ ಪ್ರಶಸ್ತಿ
ದುಬೈ : ಇಲ್ಲಿನ ಗ್ರಾಂಡ್ ಹಯಾತ್ ಹೋಟೆಲಿನ ಬನಿಯಾಸ್ ಬಾಲ್ ರೂಮ್ ನಲ್ಲಿ ನಡೆದ ಗಲ್ಫ್ ಕರ್ನಾಟಕೋತ್ಸವ ಸಮಾರಂಭದಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ ಸ್ಥಾಪಕ ಅಧ್ಯಕ್ಷ ,ಸ್ಕಿಲ್ ಟೆಕ್ ಹೆಚ್ಆರ್ ಕನ್ಸಲ್ಟೆನ್ಸಿ(Skiltec Ace Global HR Consultancy) ಇದರ ಡೈರೆಕ್ಟರ್ ಮುಹಮ್ಮದ್ ಅಲಿ ಉಚ್ಚಿಲ್ ಅವರು “ಗಲ್ಫ್ ಕರ್ನಾಟಕ ರತ್ನ ” ಪ್ರಶಸ್ತಿ ಪಡೆದಿದ್ದಾರೆ.
ಡಾ ।ತುಂಬೆ ಮೊಯಿದಿನ್ ರವರು ಚಾಲಕ ಶಕ್ತಿಯಾಗಿರುವ ಪ್ರಥಮ ಗಲ್ಫ್ ಕರ್ನಾಟಕೋತ್ಸವ ಸಮಾರಂಭದಲ್ಲಿ ಸಾವಿರಕ್ಕೂ ಮಿಕ್ಕ ಕನ್ನಡಿಗರು ಭಾಗವಹಿಸಿದ್ದರು .
ಮುಖ್ಯ ಅತಿಥಿ ಶೇಖ್ ಮುಹಮ್ಮದ್ ಮಖ್ತೂಮ್ ಜುಮಾ ಅಲ್ ಮಖ್ತೂಮ್ ಅವರು ಮುಹಮ್ಮದ್ ಅಲಿ ಉಚ್ಚಿಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು .
ಮುಹಮ್ಮದ್ ಅಲಿ ಉಚ್ಚಿಲ್ ಅವರು ಇವರು ಬಿಸಿಸಿಐ ,ಇಂಡಿಯ ಸೋಶಿಯಲ್ ಸೆಂಟರ್, ಇಂಡಿಯನ್ ಇಸ್ಲಾಮಿಕ್ ಸೆಂಟರ್, ಇಂಡಿಯನ್ ಬಿಸಿನೆಸ್ ಅಂಡ್ ಪ್ರೊಫೆಷನಲ್ ಫೋರಮ್, ಕರ್ನಾಟಕ ಎನೆ ಆರ್ ಐ ಫಾರಂ ಮುಂತಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಬಿಡಬ್ಲ್ಯೂಎಫ್ ಮತ್ತು ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ನಡೆಸುತ್ತಿರುವ ಸಾಮುದಾಯಿಕ ಮತ್ತು ಸಾಮಾಜಿಕ ಸೇವೆಯನ್ನು ಶ್ಲಾಘಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಚಿವರಾದ ಶ್ರೀ ಹೆಚ್.ಸಿ. ಮಹದೇವಪ್ಪ, ಶ್ರೀ ಕೆ. ವೆಂಕಟೇಶ್ ಮತ್ತು ಡಾ। ಯು.ಟಿ. ಇಫ್ತಿಕಾರ್, ಸೈಯದ್ ಖಲೀಲ್, ಬಿ .ಕೆ .ಯೂಸಫ್ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.