ಅಬುಧಾಬಿ: ಸಾಹೇಬಾನ್ ಸಮುದಾಯದಿಂದ ಇಫ್ತಾರ್ ಕೂಟ
ಅಬುಧಾಬಿ: ಅಬುಧಾಬಿ ಸಾಹೇಬಾನ್ ಸಮುದಾಯವು ತನ್ನ ಸಮುದಾಯದ ಸದಸ್ಯರು ಹಾಗೂ ಕುಟುಂಬದವರಿಗಾಗಿ ಮಾರ್ಚ್ 23ರಂದು ಅಬುಧಾಬಿಯಲ್ಲಿನ ಇಂಡಿಯಾ ಸೋಷಿಯಲ್ ಸೆಂಟರ್ ನಲ್ಲಿ ಭವ್ಯ ಇಫ್ತಾರ್ ಕೂಟವನ್ನು ಆಯೋಜಸಿತ್ತು.
ಸಾಹೇಬಾನ್ ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿದೆ.
ಈ ಔತಣ ಕೂಟವು ಮಾಸ್ಟರ್ ಅನಸ್ ಅಹ್ಮದ್ ಅವರ ಪವಿತ್ರ ಕುರ್‌ಆನ್ ಪಠಣದೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಅಬುಧಾಬಿಗೆ ಭೇಟಿ ನೀಡಿದ್ದ ಮೌಲಾನಾ ಸಯೀದ್ ಝೈನುಲ್ ಅಬಿದೀನ್ ತಂಙಳ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸಭಿಕರನ್ನು ಸ್ವಾಗತಿಸಿದ ಅಲ್ತಾಫ್ ಎಂ.ಎಸ್., ಸಾಹೇಬಾನ್ ಅಬುಧಾಬಿ ಇಫ್ತಾರ್ ಕೂಟಗಳ ಪರಂಪರೆಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮವು ಸಾಹೇಬಾನ್ ಸಮುದಾಯದ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಕೇವಲ ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಮಾತ್ರ ಅವಕಾಶ ಒದಗಿಸದೆ, ತಮ್ಮ ಸಮುದಾಯದ ಸದಸ್ಯರೊಂದಿಗೆ ಸಂಪರ್ಕ ಹೊಂದಿ, ಸಂತಸದ ಗಳಿಗೆಗಳನ್ನು ಕಳೆಯಲೂ ಅವಕಾಶ ಮಾಡಿಕೊಟ್ಟಿತು. ಬ್ಯಾರೀಸ್ ವೆಲ್‌ಫೇರ್ ಫೋರಮ್ ನ ಅಬ್ದುಲ್ಲಾ ಮಾದುಮೂಲೆ, ಅಬ್ದುಲ್ ಮಜೀದ್, ಮುಹಮ್ಮದ್ ಕಲ್ಲಾಪು ಹಾಗೂ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರು ಸೇರಿದಂತೆ ಹಲವಾರು ಬ್ಯಾರಿ ಸಮುದಾಯದ ಗಣ್ಯರು ಈ ಔತಣ ಕೂಟದಲ್ಲಿ ಉಪಸ್ಥಿತರಿದ್ದರು.
ನಾಸಿರ್ ಸೈಯದ್, ಎಂ ಐ ಜಮೀಲ್ (ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ) , ಸಾಹೇಬಾನ್ ಸಮುದಾಯದ ಹಿತೈಷಿಗಳಾದ ಅಬೂ ಮುಹಮ್ಮದ್, ಆದಿಲ್ ಶಂಶುದ್ದೀನ್, ಅಬ್ದುಲ್ ರಹೀಮ್ ದಾವೂದ್, ರಿಝ್ವಾನ್ ಅಝೀಝ್, ಅಕ್ರಮ್ ಮುಹಮ್ಮದ್, ಇರ್ಫಾನ್ ಅಬ್ದುಲ್ ರಹೀಮ್ ಶೇಖ್, ಯೂನಸ್ ಶೇಕ್, ಕೆ. ಮುಹಮ್ಮದ್ ಅನ್ಸಾರ್, ಆದಿಲ್ ಹುಸೇನ್, ಅಮ್ಜದ್ ಖಲೀಫ್, ಮುಹಮ್ಮದ್ ಆಸಿಫ್, ಅರ್ಷದ್ ಅಹ್ಮದ್, ಅಜ್ಮಲ್ ಮುಹಮ್ಮದ್, ಸಿಎ ಹನೀಫ್ ಮುಹಮ್ಮದ್, ರಹ್ಮಾನ್ ಬೇಗ್, ರಫೀಕ್ ಅಹ್ಮದ್, ಸಾಜಿದ್ ಅನ್ಸಾರ್, ಸಿಎ ಸಮೀವುಲ್ಲಾ ಮುಹಮ್ಮದ್, ಅಜ್ಮಲ್ ಜಮಾಲ್, ಮೊಹ್ಸಿನ್ ಶೇಖ್, ತಬ್ರೇಝ್ ವಂಟಿ, ಅನ್ಸಾರ್ ಬೈಂದೂರು ಮತ್ತು ಅಲ್ತಾಫ್ ಎಂ ಎಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಸ್ವಯಂಸೇವಕರಾದ ಅಕ್ಬರ್ ಅಲಿ, ಇಮ್ದಾದುಲ್ಲಾ, ರಿಹ್ಯಾಝ್ ಅವರ ಬೆಂಬಲದೊಂದಿಗೆ ಟೀಮ್ ಸಾಹೇಬಾನ್, ಯುವ ಸ್ವಯಂಸೇವಕರ ತಂಡದ ಸಹಕಾರಿಂದ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.
ಕಾರ್ಯಕ್ರಮವನ್ನು ಮುಹಮ್ಮದ್ ಅಜ್ಮಲ್ ಜಮಾಲ್ ನಿರ್ವಹಿಸಿದರು, ಫೈಝಾನ್ ಖತೀಬ್ ತಾಂತ್ರಿಕ ಬೆಂಬಲ ಒದಗಿಸಿದರು.
ಮುಹಮ್ಮದ್ ಜಾಬಿರ್ ಸ್ವಾಗತಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಸಾಹೇಬಾನ್ ಅಬುಧಾಬಿ ತಂಡವು ಸಾಹೇಬಾನ್ ಅಬುಧಾಬಿಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿತು.