ದುಬೈ: ಡಾ. ಆಝಾದ್ ಮೂಪನ್ ರನ್ನು ಭೇಟಿಯಾದ ಸ್ಪೀಕರ್ ಯುಟಿ ಖಾದರ್
ದುಬೈ, ಜೂ. 24: ದುಬೈಗೆ ಭೇಟಿ ನೀಡಿದ್ದ ಸ್ಪೀಕರ್ ಯು ಟಿ ಖಾದರ್ ಅವರು ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಷ್ಠಿತ ಆಸ್ಟರ್ ಡಿ ಎಂ ಹೆಲ್ತ್ ಕೇರ್ ಗ್ರೂಪ್ ನ ಸ್ಥಾಪಕಾಧ್ಯಕ್ಷ ಹಾಗು ಪದ್ಮಶ್ರೀ ಪುರಸ್ಕೃತ ಡಾ. ಆಝಾದ್ ಮೂಪನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಈ ಸಂದರ್ಭದಲ್ಲಿ ಡಾ. ಆಝಾದ್ ಮೂಪನ್ ಅವರ ಅರೋಗ್ಯ ವಿಚಾರಿಸಿದ ಸ್ಪೀಕರ್ ಖಾದರ್ ಅವರು ಶೀಘ್ರವೇ ಸಂಪೂರ್ಣ ಗುಣಮುಖರಾಗಿ ತಮ್ಮ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಆಝಾದ್ ಮೂಪನ್ ಅವರ ಅಳಿಯ ಡಾ. ಅನೂಪ್ ಮೂಪನ್, ರಾಜೀವ್ ಗಾಂಧಿ ಅರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು ಟಿ ಇಫ್ತಿಕಾರ್, ನಶ್ವಾನ್ ಹಮೀದ್ ಅವರು ಉಪಸ್ಥಿತರಿದ್ದರು.
Next Story