ಜುಬೈಲ್ | ಅಲ್ ಹರಮೈನ್ ಸೂರಿಂಜೆ ಸಮಿತಿಯ ವಾರ್ಷಿಕ ಸಭೆ
ಜುಬೈಲ್ : ಅಲ್ ಹರಮೈನ್ ಜುಬೈಲ್ ಸೂರಿಂಜೆ ಸಮಿತಿಯ ವಾರ್ಷಿಕ ಸಭೆಯು ಇದೇ ಜೂ.28ರಂದು ಸೂರಿಂಜೆ ಜಮಾತ್ ಅಧ್ಯಕ್ಷರಾದ ಹಾಜಿ ಎಸ್.ಎ.ಜಲೀಲ್ ಅವರ ಅಧ್ಯಕ್ಷತೆಯೊಂದಿಗೆ DKSC ಆಡಿಟೋರಿಯಂ ಜುಬೈಲ್ನಲ್ಲಿ ಜರಗಿತು.
ಎಸ್.ಎ.ಜಲೀಲ್ ಅವರ ದುವಾದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮರ್ಷದ್ ಕಿರಾತ್ ಪಠಿಸಿದರು. ಸ್ವಾಗತ ಭಾಷಣವನ್ನು ಸಮಿತಿಯ ಅಧ್ಯಕ್ಷರಾದ ಅಬ್ದುಲ್ಲಾ ನಿಶಾನ್ ಮಿಲನ್ ಮಾಡಿದರು. ಸಾಜಿದ್ ಪಂಜ ಅವರು ಸಭೆಯನ್ನು ಉದ್ಘಾಟಿಸಿದರು. ವರದಿಯನ್ನು ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಬಿ.ಎ ಮತ್ತು ಹಣಕಾಸು ವರದಿಯನ್ನು ಉಬೈದುಲ್ಲಾ ಎಸ್.ಎ ಸೂರಿಂಜೆ ಮಂಡಿಸಿದರು.
2024-2025ನೇ ಸಾಲಿನ ಸಮಿತಿಯನ್ನು ಹಮೀದ್ ಬೊಲ್ಲಾರ್ ಮತ್ತು ನವಾಝ್ ಪಾಪು ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ.
ಸಭೆಯ ಕೊನೆಯಲ್ಲಿ ಸಿರಾಜ್ ಕಟ್ಟೆಹುಣಿ ಧನ್ಯವಾದವನ್ನು ಪ್ರಸ್ತಾಪಿಸಿದರು. ಕಾರ್ಯಕ್ರಮವನ್ನು ತೌಹೀದ್ ಪಂಜ ನಿರೂಪಿಸಿದರು.
ಹೊಸ ಸಮಿತಿ ಈ ಕೆಳಗಿಂತಿವೆ :
ಗೌರವಾಧ್ಯಕ್ಷರು : ಹಮೀದ್ ರೆಜಾಯತ್
ಅಧ್ಯಕ್ಷರು : ನಿಶಾನ್ ಅಬ್ದುಲ್ಲಾ
ಉಪಾಧ್ಯಕ್ಷರು : ಸಾಜಿದ್ ಕೆ.ಎಚ್, ಸೈಯ್ಯದ್ ಎಸ್.ಎ
ಕಾರ್ಯದರ್ಶಿ : ನವಾಜ್ ಕೆ.ಬಿ
ಜಂಟಿ ಕಾರ್ಯದರ್ಶಿ: ತೌಹೀದ್ ಕೆಎಚ್, ಸಿರಾಜ್ ಕೆಎಂ
ಕ್ಯಾಷಿಯರ್ : ಉಬೈದುಲ್ಲಾ ಎಸ್ಎ, ಸಾದಿಕ್ ಬಿಎ
ಆಯೋಜಕರು : ಇಝುದ್ದೀನ್ ಎಸ್ಎ, ಫೈಸಲ್ ಎಸ್ಎ
ಸಲಹೆಗಾರ : ನವಾಜ್ ಟಿ, ಅಶ್ರಫ್ ಎಸ್ಎ
ಲೆಕ್ಕ ಪರಿಶೋಧಕರು :ಇರ್ಷಾದ್ ಕೆ.ಬಿ, ಅನ್ಸಾರ್ ಬೊಳ್ಳಾರ್
ಮಾಧ್ಯಮ : ನಿಯಾಜ್ ಮಿಲನ್ ಮತ್ತು ಅಕಿಬ್ ಪಾಪು