ಜುಬೈಲ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಯೂತ್ ವಿಂಗ್ ವತಿಯಿಂದ ಇಫ್ತಾರ್ ಮೀಟ್

ಜುಬೈಲ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಜುಬೈಲ್ ಘಟಕ ಮತ್ತು ಯೂತ್ ವಿಂಗ್ ಜಂಟಿ ಅಶ್ರಯದಲ್ಲಿ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮ ಜುಬೈಲ್ ಅಲ್ ಫಲಾಹ್ ಮೈದಾನದಲ್ಲಿ ಜರಗಿತು.
ದಾಯಿ ಉಸ್ತಾದ್ ಝುಬೈರ್ ಸಖಾಫಿ ದುಆ ಹಾಗೂ ನಸೀಹತ್ ನೊಂದಿಗೆ ಚಾಲನೆ ನೀಡಿದರು.
ಯುವ ವಿದ್ವಾಂಸ ಉಸ್ತಾದ್ ಅರ್ಮಾನ್ ಮುಹಮ್ಮದ್ ಉದ್ಘಾಟಿಸಿದರು. ಮಾಜಿ ಶಾಸಕ ಮೊಯ್ದಿನ್ ಬಾವ, ಮುಂಬೈಯ ಹಿರಿಯ ಉಧ್ಯಮಿ ಯೂನುಸ್ ಮಾತನಾಡಿ ಸುನ್ನೀ ಸೆಂಟರ್‌ನ ಅಭಿವೃದ್ಧಿಗೆ ಪ್ರತಿಯೊಬ್ಬನೂ ಸಹಕರಿಸಬೇಕು ಮತ್ತು ನಾನೂ ಕೂಡ ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಕರೆ ನೀಡಿದರು.
ಜಬೈಲ್ ನಲ್ಲಿರುವ ಪ್ರಸಿದ್ಧ ಕಂಪೆನಿ ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಉದ್ಯಮಿ ಅಶ್ಫಾಕ್ ಕರ್ನಿರೆ ಅಲ್ ಇಹ್ಸಾನ್ ಬೆಳೆಯುತ್ತಿರುವ ಹಾದಿಯನ್ನು ಶ್ಲಾಘಿಸಿ ಕ್ರಾಂತಿ ಕಾರಿ ಯೋಜನೆಗೆ ನಾವು ಪ್ರಾಮಾಣಿಕ ವಾಗಿ ಸಹಕರಿಸುವುದಾಗಿ ಭರವಸೆ ನೀಡಿದರು.
ಅಲ್ ಫಲಾಹ್ ಸಂಸ್ಥೆಯ ಮುಖ್ಯಸ್ಥ ನಝೀರ್ ಪಡುಬಿದ್ರೆ, ಆಂಪ್ಲಿಟ್ಯೂಡ್ ಸಂಸ್ಥೆಯ ಮಾಲಕ ಜುನೈದ್, ಮಂಗಳೂರು ಖಾಝಿ ಶೈಖುನಾ ತ್ವಾಖ ಉಸ್ತಾದ್‌ರ ಸುಪುತ್ರ ಉಸ್ತಾದ್ ಹುಸೈನ್ ರಹ್ಮಾನಿ, ಕೆಸಿಎಫ್ ಅಂತರಾಷ್ಟ್ರೀಯ ನಾಯಕ ಕಮರುದ್ದೀನ್ ಗೂಡಿನಬಳಿ ಮಾತನಾಡಿದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, 30 ವಿಸ್ಯನ್ ಚೈರ್ಮಾನ್ ಹಾತಿಂ ಕೂಳೂರು, ವಲಯಾಧ್ಯಕ್ಷರಾದ ಅಬ್ದುಲ್ ಹಮೀದ್, ಕಾಪು ಪ್ರ ಕಾರ್ಯದರ್ಶಿ ಮುಹಮ್ಮದ್, ರೋಯಲ್ ಯೂತ್ ವಿಂಗ್ ಅಧ್ಯಕ್ಷ ಮುಹಮ್ಮದ್ ಸಾಮಿತ್, ಇಕ್ಬಾಲ್ ಮಲ್ಲೂರು ಉಪಸ್ಥಿತರಿದ್ದರು.
ಸುಮಾರು 2000 ಕ್ಕಿಂತಲೂ ಅಧಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು. ಜುಬೈಲ್ ಪರಿಸರದ ಎಲ್ಲಾ ಸಂಘ ಸಂಸ್ಥೆಗಳ ನಾಯಕರು ಕಾರ್ಯಕರ್ತರೂ ಭಾಗವಹಿಸಿ ಸ್ವಯಂ ಸೇವಕರಾಗಿಯೂ ಕೆಲಸ ನಿರ್ವಹಿಸಿದರು. ಕಾರ್ಯಕ್ರಮ ಸಮಿತಿಯ ಚೈರ್ಮಾನ್ ಶಮೀರ್ ಪಲಿಮಾರ್, ವೈಸ್ ಚೈರ್ಮಾನ್ ಮುಹಮ್ಮದ್ ಸಾಮಿತ್ ಬಹಳ ಮುತುವರ್ಜಿಯಿಂದ ನಾಯಕತ್ವ ವಹಿಸಿ ಯಾವುದೇ ಕುಂದು ಕೊರತೆಯಿಲ್ಲದೆ ಜನರ ಪ್ರಶಂಸೆಗೆ ಪಾತ್ರರಾದರು. ಅದೇರೀತಿ ಅವರಿಗೆ ಸಹಸ್ಪೂರ್ತಿಯಾಗಿ ಅಶ್ರಫ್ ನಾಳ, ಮುಸ್ತಫ ಮೈನಾ, ಕೆಎಚ್ ರಫೀಕ್ ಸೂರಿಂಜೆ, ಸುಲೈಮಾನ್ ಸೂರಿಂಜೆ, ಮುಹಮ್ಮದ್ ಸಾಹಿಕ್, ಜಮಾಲ್ ಕನ್ನಂಗಾರ್, ಅಹ್ಮದ್ ಕನ್ನಂಗಾರ್, ಅನ್ವರ್ ಪಡುಬಿದ್ರಿ, ಕೆರೀಂ ಪಾಣೆಮಂಗಳೂರು ಸಫೀರ್ ಗೂಡಿನಬಳಿ, ಅಬ್ದುಲ್ ಹಮೀದ್ ಅರಮೆಕ್ಸ್, ಅಬೂಬಕ್ಕರ್ ಬರ್ವ ಮತ್ತು ಯೂತ್ ವಿಂಗ್ನ ಯುವಕರು ಮತ್ತು ಘಟಕದ ಸದಸ್ಯರು ಸಹಕರಿಸಿದರು.
ಘಟಕಾಧ್ಯಕ್ಷ ಮುಹಮ್ಮದ್ ಆಲಿ ಮುಝೈನ್ ಸ್ವಾಗತಿಸಿದರು. ಇಮಾಮ್ ನವವಿ ಮದ್ರಸ ಅಧ್ಯಾಪಕರಾದ ಹಾಫಿಝ್ ರಷೀದ್ ಮಯೀನಿ ಖಿರಾಅತ್ ಪಠಿಸಿದರು.
ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ನಿರೂಪಿಸಿದರು. ಅಬ್ದುಲ್ ಹಮೀದ್ ಅರಮೆಕ್ಸ ವಂದಿಸಿದರು.