ವಿದೇಶಿಗರಿಗೆ ವಾಸಯೋಗ್ಯ ಸ್ಥಳಗಳ ಶ್ರೇಯಾಂಕ: ಅಮೆರಿಕವನ್ನು ಹಿಂದಿಕ್ಕಿದ ಸೌದಿ ಅರೇಬಿಯಾ
Facebook/File
ಲಂಡನ್: ಸೌದಿ ಅರೇಬಿಯಾವು ವಿದೇಶಿಗರಿಗೆ ವಾಸಿಸಲು ಅತ್ಯುತ್ತಮ ಸ್ಥಳಗಳಲ್ಲಿ ಒಂದೆಂದು ಆಯ್ಕೆಯಾಗಿದೆ ಈ ನಿರ್ದಿಷ್ಟ ಶ್ರೇಯಾಂಕದಲ್ಲಿ ಅಮೆರಿಕವನ್ನು ಮೀರಿಸಿದೆ ಎಂದು ಹೊಸ ವರದಿಯಿಂದ ತಿಳಿದುಬಂದಿದೆ.
Expat Insider 2023 ಸಮೀಕ್ಷೆಯ ಪ್ರಕಾರ, ಸೌದಿ ಅರೇಬಿಯಾ 28 ನೇ ಸ್ಥಾನವನ್ನು ಪಡೆದುಕೊಂಡಿದೆ, ಅಮೆರಿಕ (30 ನೇ), ಫ್ರಾನ್ಸ್ (33 ನೇ) ಹಾಗೂ ಜರ್ಮನಿ (49 ನೇ) ದೇಶಗಳು ಆ ನಂತರದ ಸ್ಥಾನದಲ್ಲಿವೆ.
ಈ ಶ್ರೇಯಾಂಕವು ಪ್ರಪಂಚದ ಅತಿದೊಡ್ಡ ವಿದೇಶಿ ಸಮುದಾಯವಾದ ಇಂಟರ್ನೇಷನ್ಸ್ ನ ಸಮಗ್ರ ಎಕ್ಸ್ಪಾಟ್ ಇನ್ಸೈಡರ್ 2023 ವರದಿಯಿಂದ ಬಂದಿದೆ, ಇದು ವಿದೇಶೀಗರ ದೃಷ್ಟಿಯ ಮೂಲಕ ಜಗತ್ತಿಗೆ ವಿಶಿಷ್ಟವಾದ ದೃಷ್ಟಿಕೋನವನ್ನು ಒದಗಿಸುತ್ತದೆ.
ಮೆಕ್ಸಿಕೋ ವಿದೇಶಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಆ ನಂತರ ಸ್ಪೇನ್ ಹಾಗೂ ಪನಾಮ ದೇಶಗಳಿವೆ
ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಿಂದ ಬಹ್ರೇನ್ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿತು. ಯುಎಇ ಹಾಗೂ ಒಮಾನ್ ಅನುಕ್ರಮವಾಗಿ 11 ಮತ್ತು 12 ನೇ ಸ್ಥಾನದಲ್ಲಿವೆ. ಕುವೈತ್ 53ನೇ ಅಂಕ ಗಳಿಸುವ ಮೂಲಕ ಶ್ರೇಯಾಂಕದಲ್ಲಿ ಕೊನೆಯ ಸ್ಥಾನದಲ್ಲಿದೆ.
172 ದೇಶಗಳಾದ್ಯಂತ 12,000 ಕ್ಕೂ ಹೆಚ್ಚು ವಿದೇಶಿಗರಿಗೆ ಕಳುಹಿಸಲಾದ ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಐದು ವಿಭಾಗಗಳಲ್ಲಿ ವಿವಿಧ ಅಂಶಗಳನ್ನು ರೇಟ್ ಮಾಡಲು ತಿಳಿಸಲಾಗಿದೆ. ಇವುಗಳಲ್ಲಿ ಜೀವನದ ಗುಣಮಟ್ಟ, ನೆಲೆಗೊಳ್ಳಲು ಸುಲಭ, ವಿದೇಶದಲ್ಲಿ ಕೆಲಸ, ವೈಯಕ್ತಿಕ ಹಣಕಾಸು ಹಾಗೂ ವಸತಿ, ಆಡಳಿತ, ಭಾಷೆ ಮತ್ತು ಡಿಜಿಟಲ್ ಜೀವನವನ್ನು ಒಳಗೊಂಡಿರುವ ವಲಸಿಗರ ಅಗತ್ಯ ಸೂಚ್ಯಂಕಗಳು ಸೇರಿವೆ.