ಸೌದಿ ಅರೇಬಿಯಾ: ಡಿಕೆಎಸ್ ಸಿ ಜುಬೈಲ್ ಘಟಕ, ಯೂತ್ ವಿಂಗ್ ವತಿಯಿಂದ ಇಫ್ತಾರ್ ಕೂಟ
ʼಡಿಕೆಎಸ್ ಸಿ ವಿಷನ್ 30ʼ ಯಶಸ್ವಿಗೊಳಿಸಲು ಅಲ್ ಮುಝೈನ್ ಸಿಇಒ ಹಾಜಿ ಝಕರಿಯ್ಯಾ ಕರೆ
ರಿಯಾದ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್ ಸಿ ) ಜುಬೈಲ್ ಮತ್ತು ಯೂತ್ ವಿಂಗ್ ಘಟಕಗಳು ಆಯೋಜಿಸಿದ್ದ ಬೃಹತ್ ಇಫ್ತಾರ್ ಕೂಟ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಲ್ ಮುಝೈನ್ ಸಿಇಒ ಹಾಜಿ ಝಕರಿಯ್ಯಾ ಅವರು, 1995 ರ ಅಕ್ಟೋಬರ್ 13 ರಂದು ಸ್ಥಾಪನೆಗೊಂಡ ಡಿಕೆಎಸ್ ಸಿ ಗೆ 30 ರ ಹರೆಯ. ಧಾರ್ಮಿಕ- ಲೌಕಿಕ ವಿದ್ಯಾಭ್ಯಾಸ ವನ್ನು ನೀಡಿ ಹಲವಾರು ವಿದ್ವಾಂಸರನ್ನು, ಪದವೀಧರರನ್ನು ಸಂಸ್ಥೆಯು ಸಮಾಜಕ್ಕೆ ಅರ್ಪಿಸಿದೆ. ಇದೀಗ ʼಡಿಕೆಎಸ್ ಸಿ ವಿಷನ್ 30ʼ ಗೆ ಚಾಲನೆ ನೀಡಲಾಗಿದೆ. ಈ ಬೃಹತ್ ಕನಸನ್ನು ನನಸಾಗಿಸುವಲ್ಲಿ ತಮ್ಮದೊಂದು ಪಾಲಿರಲಿ ಎಂದು ಹೇಳಿದರು.
ಜುಬೈಲ್ ಎಕ್ಸಪರ್ಟೈಸ್ ಸಮೂಹ ಸಂಸ್ಥೆಗಳ ಪಾಲುದಾರ ಜನಾಬ್ ಅಶ್ರಫ್ ಕರ್ನಿರೆ ಮಾತನಾಡಿ, 30 ಎಕ್ರೆ ಸ್ಥಳ ಖರೀದಿಸಿ ಡಿಕೆಎಸ್ ಸಿ ಯೂನಿವರ್ಸಿಟಿ ಸ್ಥಾಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ನಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ ಹಾಗೂ ಸಮಾಜದ ಜನರ ವಿದ್ಯಾಭ್ಯಾಸದ ಉನ್ನತಿಗೆ ಶ್ರಮಿಸೋಣ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜನಾಬ್ ನಝೀರ್ ಪಡುಬಿದ್ರಿ ಅಲ್ ಫಲಾಹ್, ಜನಾಬ್ ಅಸ್ಕಾಫ್, ಮರ್ಕಝ್ ಮೂಳೂರು ಉಪಾಧ್ಯಕ್ಷ ಹಾಜಿ ಇಸ್ಮಾಈಲ್ ಕಿನ್ಯ, ವಿಶ್ವ ಕನ್ನಡಿಗ ಕರ್ನಾಟಕ ಸೌದಿ ಅರೇಬಿಯ ಇದರ ಅಧ್ಯಕ್ಷ ಶ್ರೀ ಸತೀಶ್ ಬಜಾಲ್ ಮಾತನಾಡಿ, ʼಡಿಕೆಎಸ್ ಸಿ ವಿಷನ್ 30ʼ ಎಂಬ ಈ ಬೃಹತ್ ಯೋಜನೆಯಲ್ಲಿ ನಾವೆಲ್ಲರೂ ಡಿಕೆಎಸ್ ಸಿಯೊಂದಿಗಿದ್ದೇವೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಹಾಗೂ ಡಿಕೆಎಸ್ ಸಿಯ ಕನಸನ್ನು ನನಸಾಗಿಸಬೇಕಾಗಿದೆ. ಇದನ್ನು ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರು.
ʼಡಿಕೆಎಸ್ ಸಿ ವಿಷನ್ 30ʼ ಚೆಯರ್ಮ್ಯಾನ್ ಹಾಜಿ ಹಾತಿಂ ಕೂಳೂರು, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಡಿಕೆಎಸ್ ಸಿ ದಮ್ಮಾಂ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಜುಬೈಲ್ ಘಟಕದ ಅಧ್ಯಕ್ಷ ಅಶ್ರಫ್ ನಾಳ, ಯೂತ್ ವಿಂಗ್ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್, ಕೇಂದ್ರ ಸಮಿತಿ ಸಂವಹಣಾ ಕಾರ್ಯದರ್ಶಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ, ಕಾರ್ಯದರ್ಶಿಗಳಾದ ಅಬೂಬಕ್ಕರ್ ಬರ್ವ, ಅಬ್ದುಲ್ ಗಫೂರ್ ಸಜಿಪ, ತುಖ್ಬಾ ಘಟಕದ ನೇತಾರ ಅಬ್ದುಲ್ ಅಝೀಝ್ ಮೂಳೂರು, ಫಾರೂಖ್ ಕನ್ಯಾನ, ಅಬ್ದುಲ್ ಅಝೀಝ್ ಪವಿತ್ರ ಹಾಗೂ ಅಲ್ ಹಸ್ಸ, ಜುಬೈಲ್, ದಮ್ಮಾಂ, ಖೋಬರ್, ತುಖ್ಬಾ ಘಟಕದ ಹಿತೈಷಿಗಳು, ಬೃಹತ್ ಸಮಾವೇಶ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಯು.ಡಿ.ಅಬ್ದುಲ್ ಹಮೀದ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.